ಕಮಲ್‌ ಹಾಸನ್‌ ಹೇಳಿಕೆ ಖಂಡನೀಯ: ಸಂಸದ ಯದುವೀರ್ ಒಡೆಯರ್

ಕಮಲ್‌ ಹಾಸನ್‌ ಹೇಳಿಕೆ ಖಂಡನೀಯ: ಸಂಸದ ಯದುವೀರ್ ಒಡೆಯರ್

ಮೈಸೂರು:ಕನ್ನಡ ಭಾಷೆ ತಮಿಳಿನಿಂದ ಬಂದಿದ್ದು ಎಂದು ಚಿತ್ರನಟ ಕಮಲ್‌ ಹಾಸನ್‌ ಹೇಳರುವುದು ಖಂಡನಾರ್ಹ ಎಂದು ಸಂಸದ ಯದುವೀರ್ ಹೇಳಿದ್ದಾರೆ‌.ಕಮಲ್‌ ಅತ್ಯದ್ಭುತ ನಟ, ಇಡೀ ಭಾರತದಲ್ಲಿಯೇ ಅತ್ಯಂತ ಮನೋಜ್ಞ ನಟ ಎಂದು ಖ್ಯಾತಿ ಗಳಿಸಿದ್ದಾರೆ. ನಾನು ಕೂಡ ಅವರ ಚಿತ್ರಗಳನ್ನು ನೋಡಿದ್ದೇನೆ. ಹಾಗೆಂದು ಅವರು ಹೇಳಿದ್ದನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕನ್ನಡ ಭಾಷೆಯ ಮೇಲೆ ಹಲವಾರು ಭಾಷೆಗಳು ಪ್ರಭಾವ ಬೀರಿದೆ ಎಂದು ತಜ್ಞರು ಹೇಳಿದ್ದಾರೆ. ಈ ಬಗ್ಗೆ ಚರ್ಚೆ ನಡೆಸುವುದು ಸರಿಯಲ್ಲ. ನಮ್ಮ ಲಿಪಿ ಕೂಡ ಇತಿಹಾಸದಲ್ಲಿ ದಾಖಲಾಗಿದೆ. ಇದನ್ನ ಅವರು ತಿಳಿದುಕೊಳ್ಳಬೇಕು ಎಂದರು.ತಮಿಳು ಮತ್ತು ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಹೀಗಿರುವಾಗ ಕಮಲ್‌ ಹಾಸನ್‌ ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಸಂಸದ ಯದುವೀರ್‌ ಒಡೆಯರ್ ತಿಳಿಸಿದ್ದಾರೆ.