ಕಲ್ಲುಬಾಣೆ: ಸಮಸ್ತ ಮದರಸ ಅಧ್ಯಾಪಕರ ಸಂಗಮ

ವಿರಾಜಪೇಟೆ: ಸಮಸ್ತ ಮದರಸ ಅಧ್ಯಾಪಕರ ಮತ್ತು ಮುಖ್ಯೋಪಾಧ್ಯಾಯರ ಸಂಗಮವು ವಿರಾಜಪೇಟೆ ಸಮೀಪದ ಕಲ್ಲುಬಾಣೆಯಲ್ಲಿ ನಡೆಯಿತು.ಕೇಂದ್ರ ಕಾರ್ಯದರ್ಶಿ ಎಂ ಅಬ್ದುರಹ್ಮಾನ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸಿ ಉಸ್ಮಾನ್ ಫೈಝಿ ಕಾರ್ಯಕ್ರಮವನ್ನು ಉದ್ಗಾಟಿಸಿದರು. ಮುಖ್ಯ ಭಾಷಣಗಾರರಾಗಿ ಆಗಮಿಸಿದ ಖುಬೈಬ್ ವಾಫಿ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಸಮಕಾಲೀನ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ತಿಳಿದು ಅವರ ಹೃದಯಂತರಾಳದತ್ತ ಸ್ವೀಕಾರ್ಹ ವಾಗುವ ನಿಟ್ಟಿನಲ್ಲಿ ಭೋದನೆಯನ್ನು ನೀಡಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿರಾಜಪೇಟೆ ಮತ್ತು ಸಿದ್ದಾಪುರ ರೇಂಜ್ ಕಾರ್ಯದರ್ಶಿ ಗಳಾದ ಹನೀಫ್ ಫೈಝಿ ಬಶೀರ್ ಹಸನಿಯವರಿಗೆ ಬಹುಮಾನವನ್ನು ವಿತರಿಸಲಾಯಿತು.ಪಿ.ಎಂ ಆರಿಫ್ ಫೈಝಿ ಸ್ವಾಗತಿಸಿ, ಎಂ ತಮ್ಲೀಖ್ ದಾರಿಮಿ ವಂದಿಸಿದರು.