ಕುಶಾಲನಗರ:ಮೇ 19ರಂದು AIKMCC ಹೋಂ ಕೇರ್ ಉದ್ಘಾಟನೆ

ಮಡಿಕೇರಿ:ಕೊಡಗಿನಲ್ಲಿ ಸಾವಿರಾರು ರೋಗಿಗಳಿಗೆ ಸಾಂತ್ವನವಾಗಿ ಕಾರ್ಯಾಚರಿಸುತ್ತಿರುವ ಶಿಹಾಬ್ ತಂಘಳ್ ಸೆಂಟರ್ ಫಾರ್ ಹ್ಯುಮಾನಿಟಿ ಹೋಂ ಕೇರ್ ಎಂಬ ಸಂಸ್ಥೆಯು ವಿರಾಜಪೇಟೆಯಲ್ಲಿ ಸೆಂಟರ್ ಹೊಂದಿದ್ದು, ಇದೀಗ ಹೊಸ ಸೆಂಟರನ್ನು ಕುಶಾಲನಗರದಲ್ಲಿ ಪ್ರಾರಂಭಿಸಲಿದ್ದು, ಕುಶಾಲನಗರದಲ್ಲಿ AIKMCC Palliative ಹೋಂ ಕೇರ್ ಕಛೇರಿಯ ಉದ್ಘಾಟನೆಯು ಇದೇ ಮೇ19ರ ಸೋಮವಾರ ಬೆಳಗ್ಗೆ 10:00 ಗಂಟೆಗೆ ಪಾಣಕ್ಕಾಡ್ ಸಯ್ಯದ್ ರಶೀದ್ ಅಲಿ ಶಿಹಾಬ್ ತಂಙಳ್ ರವರು ಉದ್ಘಾಟನೆ ಮಾಡಲಿದ್ದಾರೆ.ಅದೇ ದಿನ ಬೆಳಗ್ಗೆ 10:00 ರಿಂದ ಮದ್ಯಾಹ್ನ 1:00 ಗಂಟೆಯವರೆಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.