ಕೂರ್ಗ್ ಡೈಲಿ ಗ್ರೌಂಡ್ ರಿಪೋರ್ಟ್! ಕೊಡಗಿನ ಶಾಸಕರ ಬಗ್ಗೆ ಕೂರ್ಗ್ ಡೈಲಿ ನಡೆಸಿದ POLLING ಫಲಿತಾಂಶ ಇಲ್ಲಿದೆ ನೋಡಿ👇🏻

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ಕ್ಷೇತ್ರದ ಶಾಸಕ ಎಎಸ್ ಪೊನ್ನಣ್ಣ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಶಾಸಕರಾಗಿ ಗೆಲುವು ಸಾಧಿಸಿದ ಇಂದಿಗೆ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆ, ಶಾಸಕದ್ವಯರ ಆಡಳಿತ ವೈಖರಿಯ ಬಗ್ಗೆ ಕೂರ್ಗ್ ಡೈಲಿ ಜನಾಭಿಪ್ರಾಯ ಸಂಗ್ರಹಿಸಿತು.ಇಂದು ಬೆಳಗ್ಗೆ ಏಳು ಗಂಟೆಯಿಂದ ಪೋಲ್ ಮಾಡಕ್ಕೆ ಅವಕಾಶ ನೀಡಲಾಗಿತ್ತು.ರಾತ್ರಿ ಎಂಟು ಗಂಟೆಯವರೆಗೆ ನಡೆದ ಪೋಲಿಂಗ್ ನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.ಪೋಲಿಂಗ್ ನಲ್ಲಿ ಭಾಗವಹಿಸಿದ ಎಲ್ಲರಿಗೂ ಕೂರ್ಗ್ ಡೈಲಿ ವತಿಯಿಂದ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇವೆ.ಪೋಲಿಂಗ್ ನಲ್ಲಿ ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದವರ ಮಾಹಿತಿ ಗೌಪ್ಯವಾಗಿ ಇಡಲಾಗುವುದು.
ಅತ್ಯುತ್ತಮ: 71.5%
ಉತ್ತಮ:11.1%
ಏನೂ ಇಲ್ಲ:4.1%
ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು:10%
ಸಮಾಧಾನಕರ:3.3%