ಕೊಡಗು ಮುಸ್ಲಿಂ ಕಪ್ ಫುಟ್ಬಾಲ್: ಎರಡು ಬಾರಿಯ ಚಾಂಪಿಯನ್ ಅಲ್ ಅಮೀನ್ ಪಾಲಿಬೆಟ್ಟ ತಂಡಕ್ಕೆ ಮೊದಲ ಪಂದ್ಯದಲ್ಲೇ ಸೋಲು

ಕೊಡಗು ಮುಸ್ಲಿಂ ಕಪ್ ಫುಟ್ಬಾಲ್: ಎರಡು ಬಾರಿಯ ಚಾಂಪಿಯನ್ ಅಲ್ ಅಮೀನ್ ಪಾಲಿಬೆಟ್ಟ  ತಂಡಕ್ಕೆ ಮೊದಲ ಪಂದ್ಯದಲ್ಲೇ ಸೋಲು

ಮಡಿಕೇರಿ: ಕೊಡಗು ಜಿಲ್ಲಾ ಮುಸ್ಲಿಂ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಅಮ್ಮತ್ತಿ ಫ್ರೆಂಡ್ಸ್ ಸಹಯೋಗದೊಂದಿಗೆ ಅಮ್ಮತ್ತಿಯ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಮುಸ್ಲಿಮ್ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಎರಡು ಬಾರಿ ಚಾಂಪಿಯನ್ ಪ್ರಶಸ್ತಿ ಹಾಗೂ ಒಂದು ಬಾರಿ ರನ್ನರ್ ಪ್ರಶಸ್ತಿ ಪಡೆದಿದ್ದು ಜಿಲ್ಲೆಯ ಪ್ರತಿಷ್ಠಿತ ತಂಡ ಅಲ್ ಅಮೀನ್ ಪಾಲಿಬೆಟ್ಟ ತಂಡಕ್ಕೆ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ ಎದುರಾಗಿದೆ.

ಕಳೆದ ಬಾರಿ ಕುಶಾಲನಗರದಲ್ಲಿ ನಡೆದಿದ್ದ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ ಅಲ್ ಅಮೀನ್ ಪಾಲಿಬೆಟ್ಟ ತಂಡಕ್ಕೆ ಈ ಬಾರಿ ಮೊದಲ ಪಂದ್ಯದಲ್ಲೇ ಉದಯೋನ್ಮುಖ ಆಟಗಾರರನ್ನೊಳಗೊಂಡ ಸ್ಟನ್ನರ್ಸ್ ಎಫ್‌ಸಿ ಬೇತ್ರಿ ತಂಡವು ಸೋಲಿನ ರುಚಿ ತೋರಿಸಿದೆ.ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಅಲ್ ಅಮೀನ್ ಪಾಲಿಬೆಟ್ಟ ಹಾಗೂ ಸ್ಟನ್ನರ್ಸ್ ಎಫ್‌ಸಿ ಬೇತ್ರಿ ತಂಡಗಳು ನಿಗದಿತ ಸಮಯದಲ್ಲಿ 2-2 ಗೋಲುಗಳನ್ನು ದಾಖಲಿಸಿ ಸಮಬಲ ಸಾಧಿಸಿತು‌.ಅಂತಿಮವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ ಸ್ಟನ್ನರ್ಸ್ ಎಫ್.ಸಿ ತಂಡವು 4-2 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಚಾಂಪಿಯನ್ ತಂಡಕ್ಕೆ ಸೋಲಿನ ಆಘಾತ ನೀಡಿದೆ.