ಕೊಡಗು ಮುಸ್ಲಿಮ್ ಕಪ್ ಫುಟ್ಬಾಲ್: ಆತಿಥೇಯ ಎ.ಎಂ.ಎಫ್ ಸಿ ಅಮ್ಮತ್ತಿ (ಬಿ) ಹಾಗೂ ಕಡಂಗ ಎಫ್.ಸಿ( ಎ) ಕ್ವಾಟರ್ ಫೈನಲ್ ಲಗ್ಗೆ

ಕೊಡಗು ಮುಸ್ಲಿಮ್ ಕಪ್ ಫುಟ್ಬಾಲ್: ಆತಿಥೇಯ ಎ.ಎಂ.ಎಫ್ ಸಿ ಅಮ್ಮತ್ತಿ (ಬಿ) ಹಾಗೂ ಕಡಂಗ ಎಫ್.ಸಿ( ಎ)  ಕ್ವಾಟರ್ ಫೈನಲ್ ಲಗ್ಗೆ

ಮಡಿಕೇರಿ: ಕೊಡಗು ಜಿಲ್ಲಾ ಮುಸ್ಲಿಂ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಅಮ್ಮತ್ತಿ ಫ್ರೆಂಡ್ಸ್ ಸಹಯೋಗದೊಂದಿಗೆ ಅಮ್ಮತ್ತಿಯ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಮುಸ್ಲಿಮ್ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ  ಆತಿಥೇಯ ಎ.ಎಂ.ಎಫ್ ಸಿ ಅಮ್ಮತ್ತಿ (ಬಿ) ಹಾಗೂ ಕಡಂಗ ಎಫ್.ಸಿ( ಎ) ಕ್ವಾಟರ್ ಫೈನಲ್ ಲಗ್ಗೆ ಇಟ್ಟಿದೆ.

ಕಡಂಗ ಎಫ್.ಸಿ (ಎ) ಹಾಗೂ ರಾಕಿಂಗ್ ಬಾಯ್ಸ್ ಕುಂಜಿಲ ತಂಡಗಳ ನಡುವೆ ನಡೆದ ಫ್ರೀ ಕ್ವಾಟರ್ ಫೈನಲ್ ಪಂದ್ಯದಲ್ಲಿ ಕಡಂಗ ಎಫ್‌ಸಿ ತಂಡವು 3-0 ಗೋಲುಗಳ ಅಂತರದಿಂದ ಗೆದ್ದು ಕ್ವಾಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದೆ.ಕಡಂಗ ತಂಡದ ಪರವಾಗಿ ಉನೈಸ್ ಎರಡು ಹಾಗೂ ಶಮ್ಮಾಸ್ ಒಂದು ಗೋಲು ದಾಖಲಿಸಿದರು.

ದ್ವಿತೀಯ ಫ್ರೀ ಕ್ವಾಟರ್ ಫೈನಲ್ ಪಂದ್ಯವು ಮಾಜಿ ಚಾಂಪಿಯನ್ ತಂಡವನ್ನು ಮಣಿಸಿದ ಸ್ಟನ್ನರ್ಸ್ ಎಫ್‌.ಸಿ ಬೇತ್ರಿ ಹಾಗೂ ಆತಿಥೇಯ ಅಮ್ಮತ್ತಿ ಫ್ರೆಂಡ್ಸ್ ಅಮ್ಮತ್ತಿ (ಬಿ) ತಂಡಗಳ ನಡುವೆ ನಡೆಯಿತು.ಎ.ಎಮ್‌ಎಫ್.ಸಿ ಅಮ್ಮತ್ತಿ ತಂಡವು 2-0 ಗೋಲುಗಳ ಅಂತರದಿಂದ ಗೆದ್ದು ಕ್ವಾಟರ್ ಫೈನಲ್ ಗೆ ಅರ್ಹತೆ ಪಡೆದುಕೊಂಡಿದೆ.ಅಮ್ಮತ್ತಿ ತಂಡದ ಪರವಾಗಿ ಚಿನ್ನು 2 ಗೋಲುಗಳನ್ನು ದಾಖಲಿಸಿ ಅಮೋಘ ಆಟವಾಡಿದರು.