ಗೋಣಿಕೊಪ್ಪ: ಸರ್ವದೈವತ ಆಂಗ್ಲ ಮಾಧ್ಯಮ ಶಾಲೆಯಲ್ಲಿ "ಶಾಲಾ ಪ್ರಾರಂಭೋತ್ಸವ "ಕಾರ್ಯಕ್ರಮ

ಗೋಣಿಕೊಪ್ಪ: ಸರ್ವದೈವತ ಆಂಗ್ಲ ಮಾಧ್ಯಮ ಶಾಲೆಯಲ್ಲಿ "ಶಾಲಾ ಪ್ರಾರಂಭೋತ್ಸವ "ಕಾರ್ಯಕ್ರಮ
ಗೋಣಿಕೊಪ್ಪ: ಸರ್ವದೈವತ ಆಂಗ್ಲ ಮಾಧ್ಯಮ ಶಾಲೆಯಲ್ಲಿ "ಶಾಲಾ ಪ್ರಾರಂಭೋತ್ಸವ "ಕಾರ್ಯಕ್ರಮ

ಗೋಣಿಕೊಪ್ಪ:ಸಮೀಪದ ಅರ್ವತ್ತೋಕ್ಲುವಿನಲ್ಲಿರುವ ಸರ್ವದೈವತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾರಂಭೋತ್ಸವ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು. ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ ಮೊಣ್ಣಪ್ಪ, ಹಿರಿಯ ಪ್ರಾಂಶುಪಾಲರಾದ ಲಲಿತ ಮೊಣ್ಣಪ್ಪ, ಪ್ರಾಂಶುಪಾಲರಾದ ಪ್ರದೀಪ್, ಮುಖ್ಯ ಶಿಕ್ಷಕಿ ಶೀಲಾ ಬೋಪಣ್ಣ, ಶಿಕ್ಷಕರು , ಉಪನ್ಯಾಸಕರು , ಸಿಬ್ಬಂದಿಗಳು ಸ್ವಾಗತಿಸಿದರು.ಶಾರದ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಬರಮಾಡಿಕೊಂಡರು.ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ ಮೊಣ್ಣಪ್ಪ ವಿದ್ಯಾರ್ಥಿಗಳಿಗೆ ಶುಭಕೋರಿದರು.ನಂತರ ಮಕ್ಕಳಿಗೆ ಸಿಹಿ ಹಂಚಲಾಯಿತು.