ನಾಳೆ ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ:

ಮಡಿಕೇರಿ: ಮೇ 17(ನಾಳೆ) ರಂದು ಚೆಟ್ಟಳ್ಳಿ 11 ಕೆವಿ ವಿದ್ಯುತ್ ಮಾರ್ಗದ ಮುಂಗಾರು ಮುಂಜಾಗೃತ ನಿರ್ವಹಣಾ ಕಾರ್ಯ ಇರುವುದರಿಂದ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಮತ್ತಿಕಾಡು, ಅಬ್ಯಾಲ, ಪೊನ್ನತಮೊಟ್ಟೆ, ಕಂಡಕರೆ, ಚೆಟ್ಟಳ್ಳಿ, ಶ್ರೀಮಂಗಲ, ಬಕ್ಕ, ಮಲ್ಕೋಡು ಇಲ್ಲಿ ವಿದ್ಯುತ್ ಇರುವುದಿಲ್ಲ.ಗ್ರಾಹಕರು ಸಹಕರಿಸಬೇಕಾಗಿ ಕುಶಾಲನಗರ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಕೋರಿದ್ದಾರೆ.