ನಿರಂತರವಾಗಿ ಕ್ರೀಡಾಕೂಟಗಳನ್ನು ಆಯೋಜಿಸುವುದು ಸವಾಲಿನ ಕೆಲಸ :ಎ.ಪಿ. ಅಲ್ತಾಫ್ ಗ್ರಾಮಾಂತರ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ವಿರಾಜಪೇಟೆಯಲ್ಲಿ ಚಾಲನೆ

ನಿರಂತರವಾಗಿ ಕ್ರೀಡಾಕೂಟಗಳನ್ನು ಆಯೋಜಿಸುವುದು ಸವಾಲಿನ  ಕೆಲಸ :ಎ.ಪಿ. ಅಲ್ತಾಫ್  ಗ್ರಾಮಾಂತರ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ವಿರಾಜಪೇಟೆಯಲ್ಲಿ ಚಾಲನೆ
ನಿರಂತರವಾಗಿ ಕ್ರೀಡಾಕೂಟಗಳನ್ನು ಆಯೋಜಿಸುವುದು ಸವಾಲಿನ  ಕೆಲಸ :ಎ.ಪಿ. ಅಲ್ತಾಫ್  ಗ್ರಾಮಾಂತರ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ವಿರಾಜಪೇಟೆಯಲ್ಲಿ ಚಾಲನೆ

ವಿರಾಜಪೇಟೆ:ನಗರದ ತಾಲೂಕು ಮೈದಾನದಲ್ಲಿ ಹಲವು ಕ್ರೀಡಾಕೂಟಗಳು ಆಯೋಜನೆಗೊಂಡಿದೆ.ಸಂಸ್ಥೆಯೊಂದು ಆರ್ಥಿಕ ಹಿನ್ನಡೆಯ ಮೂಲಕ ಕ್ರೀಡೆಗೆ ಮಹತ್ವ ನೀಡಿ ಪಂದ್ಯಾಟ ಆಯೋಜಿಸಿಕೊಂಡು ಬಂದಿದೆ ಎಂದು ಹಿರಿಯ ಕ್ರೀಡಾಪಟು ಮತ್ತು ಉದ್ಯಮಿಯಾಗಿರುವ ಎಂ.ಪಿ. ಅಲ್ತಾಫ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ನವಜ್ಯೋತಿ ಸಂಘ ನೆಹರು ನಗರ ವಿರಾಜಪೇಟೆ ವತಿಯಿಂದ ೩೧ ನೇ ವರ್ಷದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಗ್ರಾಮಾಂತರ ಮುಕ್ತ ಸೂಪರ್ 5+2 ಕಾಲ್ಚೆಂಡು ಪಂದ್ಯಾಟ ನಗರದ ತಾಲೂಕು ಮೈದಾನದಲ್ಲಿ ನಡೆಯಿತು. ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಅಲ್ತಾಫ್ , ಇತ್ತೀಚೆಗೆ ನಗರದಲ್ಲಿ ಆಯೋಜಿಸುವ ಪುಟ್ಬಾಲ್ ಪಂದ್ಯಾವಳಿಗಳಲ್ಲಿ ಹೊರ ಜಿಲ್ಲೆ,ರಾಜ್ಯ ಮತ್ತು ವಿದೇಶಿ ಆಟಗಾರರನ್ನು ಕರೆತಂದು ಆಡಿಸಲಾಗುತ್ತಿದೆ. ಇದರಿಂದ ತಂಡದ ಪ್ರತಿಷ್ಠೆ ಹೆಚ್ಚಾಗುತ್ತಿದೆ. ಬದಲಿಗೆ ಗ್ರಾಮೀಣ ಮಟ್ಟದ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಗ್ರಾಮಾಂತರ ಮಟ್ಟದ ಪಂದ್ಯಾಟ ಆಯೋಜಿಸಿರುವುದು ಶ್ಲಾಘನೀಯ. ನವಜ್ಯೋತಿ ಸಂಘವು ಸಾಮಾಜಿಕ, ಶೈಕ್ಷಣಿಕ, ಕ್ರೀಡೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಮಾನಸದಲ್ಲಿ ಮನ್ನಣೆ ಪಡೆದುಕೊಂಡಿದೆ. ಮುಂದೆಯು ಸಂಘದಿಂದ ಅನೇಕ ಕಾರ್ಯಕ್ರಮಗಳು ಮೂಡಿಬರಲಿ ಎಂದು ಶುಭ ಹಾರೈಸಿದರು.

ಉದ್ಯಮಿ ಮತ್ತು ನಗರ ಭಾ.ಜ.ಪ ಮಾಜಿ ಅದ್ಯಕ್ಷರಾದ ಅಂಜಪರುವಂಡ ಅನಿಲ್ ಮಂದಣ್ಣ ಅವರು ಮಾತನಾಡಿ ,ಯುವ ಜನಾಂಗವು ಮಾದಕವಸ್ತು ಸೇವನೆಗೆ ಬಲಿಯಾಗುತ್ತಿರುವುದು ಮತ್ತು ಮೊಬೈಲ್ ಗೀಳಿಗೆ ದಾಸರಾಗುತ್ತಿರುವುದರಿಂದ ಆರೋಗ್ಯಕ್ಕೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದೃಢಕಾಯ ಆರೋಗ್ಯಕ್ಕೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಸೂಕ್ತ. ಎಂದು ಹೇಳಿದರು.

ಸಕ್ಸಸ್ಸ್ ಮೆನ್ಸ್ ವೇರ್ ಮಾಲೀಕರಾದ ಸುರೇಶ್, ಮಾತನಾಡಿ ಯುವಕ ಸಂಘ ಆರಂಭಿಸಿ ನಂತರ ನವಜ್ಯೋತಿ ಸಂಘದ ವರೆಗಿನ ಸುದೀರ್ಘ ೩೧ ವರ್ಷಗಳ ಸೇವೆ ಅಮೋಘವಾದದ್ದು. ಸಾಮಾಜಿಕ ಕಳಕಳಿ ಕ್ರೀಡೆ, ಶಿಕ್ಷಣಕ್ಕೆ ಉತ್ತೇಜನ ನೀಡುತ್ತಾ ಗ್ರಾಮೀಣ ಭಾಗದಲ್ಲಿ ನಗರ ಪ್ರದೇಶದಲ್ಲಿ ತನ್ನಾದೆಯಾದ ಛಾಪು ಮುಡಿಸಿದೆ. ಆಯೋಜನೆಗೊಂಡ ಪಂದ್ಯಾವಳಿಯು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ನವಜ್ಯೋತಿ ಸಂಘದ ಉಪಾಧ್ಯಕ್ಷ ರಾದ ಸುನೀಲ್ , ಸಂಘದ ಸದಸ್ಯರು, ಪದಾಧಿಕಾರಿಗಳು ಕಾರ್ಯಕ್ರಮ ದ ವೇದಿಕೆಯಲ್ಲಿ ಉಪಸ್ಥಿತಿತರಿದ್ದರು.

ಮೈದಾನದಲ್ಲಿ ಕಾಶ್ಮೀರದ ಪೆಹಲ್ಗಾಂ ನಲ್ಲಿ ನಡೆದ ಉಗ್ರರಿಂದ ಹತ್ಯೆಯಾದ ಪ್ರವಾಸಿಗರ ಆತ್ಮಕ್ಕೆ ಚಿರಶಾಂತಿಗಾಗಿ ಒಂದು ನಿಮಿಷಗಳ ಕಾಲ ಮೌನ ಪ್ರಾರ್ಥನೆ ನೆರೆವೇರಿಸಲಾಯಿತು.ಕೂರ್ಗ್ ಲೆಜೆಂಡ್ ಮಾಸ್ಟರ್ಸ್ ತಂಡ ಮತ್ತು ನವಜ್ಯೋತಿ ಸಂಘ ದ ಮದ್ಯೆ ಪ್ರದರ್ಶನ ಪಂದ್ಯ ನಡೆಯಿತು. ಲೆಜೆಂಡ್ ಪರ ಎಸ್.ಬಿ.ಐ. ಆನಂದ್ ೦೨ ಗೋಲು ಗಳಿಸಿದರು.ನವಜ್ಯೋತಿ ಸಂಘದ ಪರ ಮಾರ್ವಿನ್ ಲೋಬೋ ಅವರು ೦೨ ಗೋಲು ಗಳಿಸಿದರು. ಕೂರ್ಗ್ ಲೆಜೆಂಡ್ ಮಾಸ್ಟರ್ಸ್ ತಂಡ ಜಯಗಳಿಸಿತು.

ನವಜ್ಯೋತಿ ಸಂಘದ ಪದಾಧಿಕಾರಿಗಳು,ಸದಸ್ಯರು, ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ತಂಡಗಳು ಆಟಗಾರರು ಸಾರ್ವಜನಿಕರು ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ