ಪಡಿತರ ಚೀಟಿಗೆ ಇ- ಕೆವೈಸಿ:ಲಾಸ್ಟ್ ಡೇ ಯಾವಾಗ! ಇಲ್ಲಿದೆ ಮಾಹಿತಿ

ವಿರಾಜಪೇಟೆ:ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ಸಂಬಂಧಿಸಿದಂತೆ ಪಡಿತರ ಚೀಟಿದಾರರ ಇ- ಕೆವೈಸಿ, ಪ್ರಗತಿಯು ಬಾಕಿ ಉಳಿದಿದ್ದು ಸರ್ಕಾರದ ಆದೇಶದಂತೆ ಇ-ಕೆವೈಸಿ ಮಾಡಲು ಜೂನ್ ತಿಂಗಳ 30 ರ ವರೆಗೆ ಅಂತಿಮ ದಿನ ನಿಗದಿಗೊಳಿಸಿದೆ.ಈ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರು ತಮ್ಮ ಆಧಾರ್ ಕಾರ್ಡ್ ನೊಂದಿಗೆ ಆಯಾ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿ ತೆರಳಿ ಇ- ಕೆವೈಸಿ ಮಾಡಿಕೊಳ್ಳಬೇಕು ಎಂದು ತಾಲೂಕು ಆಹಾರ ನಿರೀಕ್ಷಕರಾದ ಸೀನಾಕುಮಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.