ಬಲಮುರಿಯಲ್ಲಿ ಮನೆ ಮೇಲೆ ಬಿದ್ದ ಬೃಹತ್ ಗಾತ್ರದ ಮರ: ಅಪಾರ ನಷ್ಟ

ಬಲಮುರಿಯಲ್ಲಿ ಮನೆ ಮೇಲೆ ಬಿದ್ದ ಬೃಹತ್ ಗಾತ್ರದ ಮರ: ಅಪಾರ ನಷ್ಟ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು(Coorgdaily) :ನಾಪೋಕ್ಲು ಬಳಿಯ ಪಾರಾಣೆ ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲಮುರಿ ಗ್ರಾಮದ ನಿವಾಸಿ ಪಾಲಂದಿರ ಕಾವೇರಪ್ಪ ಎಂಬುವವರ ಮನೆ ಮೇಲೆ ಮಂಗಳವಾರ ಬೆಳಿಗ್ಗೆ ಸುರಿದ ಭಾರಿ ಗಾಳಿ ಮಳೆಗೆ ಮನೆ ಸಮೀಪದ ಮರವೊಂದು ಮನೆ ಮೇಲೆ ಉರಳಿ ಬಿದ್ದ ಪರಿಣಾಮ ಮನೆಯ ಮೇಲ್ಚಾವಣಿಗೆ ಅಳವಡಿಸಲಾದ ಹೆಂಚುಗಳು ಹಾಗೂ ಅಡುಗೆ ಮನೆಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ.

ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವಿಕ್ಷಕರಾದ ರವಿಕುಮಾರ್, ಗ್ರಾಮ ಲೆಕ್ಕಿಗೆ ಲೇಖನ,ಪಾರಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಡೆಯಂಡ ಕಟ್ಟಿ ಕುಶಾಲಪ್ಪ, ಅಭಿವೃದ್ಧಿ ಅಧಿಕಾರಿ ಸಭಾಸ್ಟಿನ್ ಪೆರೇರ, ಗ್ರಾಮ ಪಂಚಾಯಿತಿ ಸದಸ್ಯ ಬೊಳ್ಳಚೆಟ್ಟಿರ ಪ್ರಕಾಶ್, ತಾಲೂಕು ಪಂಚಾಯತಿ ಮಾಜಿ ಸದಸ್ಯ ಬೊಳ್ಳಚೆಟ್ಟಿರ ಸುರೇಶ್, ಮಾಜಿ ಗ್ರಾಮ ಪಂಚಾಯತಿ ಸದಸ್ಯ ನಾಯಕಂಡ ಮುತ್ತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.