ರಾಹುಲ್ ಗಾಂಧಿ ಜನ್ಮದಿನ: ಕಾಂಗ್ರೆಸ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ರಾಹುಲ್ ಗಾಂಧಿ ಜನ್ಮದಿನ: ಕಾಂಗ್ರೆಸ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಮಡಿಕೇರಿ:ಕೇಂದ್ರ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರ ಜನ್ಮದಿನದ ಪ್ರಯುಕ್ತ ಕಾಂಗ್ರೆಸ್ ಪಕ್ಷದ ವತಿಯಿಂದ ಕೊಡಗು ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಣ್ಣಹಂಪಲು ವಿತರಣೆ ಮಾಡಲಾಯಿತು.

ಈ ಸಂದರ್ಭ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ ಹಂಸ ಕೊಟ್ಟಮುಡಿ, ಉಪಾಧ್ಯಕ್ಷ ವಿ.ಜಿ ಮೋಹನ್, ಡಿಸಿಸಿ ಸದಸ್ಯರಾದ ಸದಸ್ಯರಾದ ಪುಷ್ಪಾ, ಖಲೀಲ್ ಪಾಷಾ, ಗ್ರಾ.ಪಂ ಸದಸ್ಯರದಾ ಜಾನ್ಸನ್ ಪಿಂಟೋ, ಕಾರ್ಮಿಕ ಘಟಕದ ಅಧ್ಯಕ್ಷರಾದ ದಿನೇಶ್, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಕವನ್ ಕೊತ್ತೋಳಿ, ಅಲ್ಪಸಂಖ್ಯಾತ ನಗರ ಅಧ್ಯಕ್ಷರಾದ ಕೌಸರ್, ಕಿರಣ್, ಅಭಿಬ್, ನಜಿರ್,ಶರಣ್ ಅರ್ಜುನ್, ಕಲಿಲ್, ಆಫೀಜ್, ದಿನೇಶ್, ಅಝೀಜ್, ಸುಬ್ರಮಣಿ, ಮೋಹನ್ ಮೌರ್ಯ ಉಪಸ್ಥಿತರಿದ್ದರು.