ವಿರಾಜಪೇಟೆ: ಜನತೆಯ ಆರೋಗ್ಯದ ಜೊತೆ ಚೆಲ್ಲಾಟ ಆಡಬೇಡಿ : ಮಾಜಿ ಶಾಸಕ ಕೆ.ಜಿ. ಬೋಪಯ್ಯ ವಾಗ್ದಾಳಿ: ಜನೌಷಧಿ ಕೇಂದ್ರ ಮುಚ್ಚದಿರುವಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ಮೌನ ಪ್ರತಿಭಟನೆ
ವಿರಾಜಪೇಟೆ(Coorgdaily):ಕೇಂದ್ರ ಸರ್ಕಾರವು ನಾಗರಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಔಷಧಿಗಳು ಲಭ್ಯವಾಗಬೇಕು ಎಂಬ ಹಿತದೃಷ್ಟಿಯಿಂದ ಜನೌಷಧಿ ಕೇಂದ್ರಗಳನ್ನು ಸ್ಥಾಪನೆ ಮಾಡಿದೆ. ರಾಜ್ಯ ಸಕಾರದ ಜನ ವಿರೋಧಿ ನೀತಿಗಳು ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರಲು ಮುಂದಾಗಿದೆ ಎಂದು ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ ಅವರು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.ಭಾರತೀಯ ಜನತಾ ಪಕ್ಷ ವಿರಾಜಪೇಟೆ ತಾಲೂಕು ವತಿಯಿಂದ ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಜನೌಷಧಿ ಕೇಂದ್ರ ರದ್ದುಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ದ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕರಾದ ಕೆ.ಜಿ ಬೋಪಯ್ಯ ಅವರು ಸಿದ್ದರಾಮಯ್ಯ ಅವರ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಪೂರ್ಣಗೊಂಡಿದೆ.ಆದರೇ ಅಭಿವೃದ್ದಿ ಮಾತ್ರ ಶೂನ್ಯ ಸಾಧನೆಯಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟೆದೆ. ಭ್ರಷ್ಟಚಾರದ ಕೂಪವಾಗಿದೆ. ಕೇಂದ್ರ ಮತ್ತು ನಮ್ಮ ಸರ್ಕಾರವು ಜಾರಿಗೆ ತಂದಿರುವ ಕೆಲವು ಯೋಜನೆಗಳನ್ನು ನಮ್ಮ ಯೋಜನೆ ಎಂದು ಬಿಂಬಿಸುತ್ತಿರುವುದು ಬೇರೆ, ಇದೀಗಾ ಬಡ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರಮೋದಿ ಅವರ ದೂರದೃಷ್ಟಿಯಿಂದ 2018 ರಲ್ಲಿ ಅಗ್ಗದ ಬೆಲೆಯಲ್ಲಿ ಔಷಧಿಗಳನ್ನು ಪಡೆಯಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪನೆ ಮಾಡಿದೆ. ಇದರಿಂದ ಜನ ಸಾಮಾನ್ಯರಿಹೆ ಕೈಗೆಟುಕುವ ಬೆಲೆಯಲ್ಲಿ ಔಷಧಿಗಳು ಲಭ್ಯವಾಗುತ್ತಿದೆ.
ರಾಜ್ಯ ಸರ್ಕಾರವು ಕೇಂದ್ರಗಳನ್ನು ರದ್ದು ಮಾಡಲು ಮುಂದಾಗಿರುವುದು ಬಡವರ ಪರ ಇರುವ ಕಾಳಜಿಯನ್ನು ವ್ಯಕ್ತ ಮಾಡುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಇಂದಿಗೂ ಎಲ್ಲಾ ಔಷಧಿಗಳಿಗೆ ಚೀಟಿ ಬರೆದು ನೀಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಔಷಧಿದಿಗಳು ಲಭ್ಯತೆ ಇಲ್ಲ. ಇದನ್ನು ಸರಿಪಡಿಸುವ ಬದಲು ಕೇಂದ್ರ ಸರ್ಕಾರದ ಮತ್ತು ಮೋದಿ ಅವರ ಭಾವಚಿತ್ರ ಇದೆ ಎಂಬ ಹೊಟ್ಟೆಹುರಿಯಿಂದ ಜನೌಷಧಿ ಕೇಂದ್ರ ರದ್ದುಗೊಳಿಸುವ ನಿರ್ಧಾರಕ್ಕೆ ಬಂದಿರುವುದಾಗಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಸುಮಾರು 15 ಸಾವಿರ ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. ಏಕಾಏಕಿಯಾಗಿ ಇಂತಹ ನಿರ್ಧಾರ ತಾಳುವುದು ಶೋಭೆಯಲ್ಲ. ಜನೌಷಧಿ ಕೇಂದ್ರಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ತಕ್ಷಣವೇ ಜಾರಿಗೆ ಬರುವಂತೆ ಕೈಬಿಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯ ಪಡಿಸುತ್ತೇನೆ ಎಂದು ಹೇಳಿದರು. ಇದು ಮುಂದುವರೆದಲ್ಲಿ ಮುಂದೆ ಪಕ್ಷದ ಆದೇಶದಂತೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕೊಡಗು ಜಿಲ್ಲಾ ಜನೌಷಧಿ ಕೇಂದ್ರ ಮಾಲೀಕರ ಸಂಘದ ಅದ್ಯಕ್ಷರಾದ ದಿನೇಶ್ ಕುಮಾರ್, ಮಾತನಾಡಿ ಜನೌಷಧಿ ಕೇಂದ್ರಗಳು ಹೆಚ್ಚಿನ ಲಾಭಾಂಶ ಪಪಡಯಲು ಸ್ಥಾಪನೆ ಮಾಡಲಿಲ್ಲ. ಬದಲಿಗೆ ಸೇವಾ ಮನೋಭಾವದಿಂದ ಆರಂಭಿಸಲಾಗಿದೆ. ಇಲ್ಲಿ ಸುಮಾರು ಶೇಕಡ 20 ರಷ್ಟು ಮಾತ್ರ ಮಾಲೀಕರಿಗೆ ಲಾಭಾಂಶ ಬರುತ್ತದೆ. ಜನೌಷಧಿ ಕೇಂದ್ರ ಮತ್ತು ಖಾಸಾಗಿ ಔಷಧಿ ಅಂಗಡಿಗಳಲ್ಲಿ ಲಭ್ಯವಾಗುವ ಔಷಧಗಳ ಬೆಲೆಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಜನತೆಗೆ ಕಡಿಮೆ ಬೆಲೆಯಲ್ಲಿ ಜೌಷಧಿಳನ್ನು ನೀಡಲು ಕೇಂದ್ರ ಸರ್ಕಾರವು ಯೋಜನೆ ಜಾರಿಗೆ ತಂದಿದೆ. ರಾಜ್ಯ ಸರ್ಕಾರವು ತಳದಿರುವ ಈ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕೆಂದು ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು.
ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಕಿಲನ್ ಗಣಪತಿ, ತಾಲೂಕು ಅಧ್ಯಕ್ಷರಾದ ಸುವೀನ್ ಗಣಪತಿ, ತಾಲೂಕು ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್ ಕುಮಾರ್, ಭಾ.ಜ.ಪ ಪ್ರಮುಖರಾದ ಪಟ್ರಪಂಡ ರಘು ನಾಣಯ್ಯ, ಕೊಡವ ಸಮಾಜ ವಿರಾಜಪೇಟೆ ಅಧ್ಯಕ್ಷರಾದ ಮನು ಕುಮಾರ್, ನಗರದ ಸಭೆ ಮಡಿಕೇರಿ ಸದಸ್ಯರಾದ ಅಪ್ಪಣ್ಣ ಮತ್ತು ಸತೀಶ್, ವಾಟೇರಿರ ಬೋಪಣ್ಣ, ಹಾಗೂ ಪುರಸಭೆಯ ಸದಸ್ಯರಾದ ಜೂನಾ, ಸುಭಾಷ್, ಶಕ್ತಿ ಕೇಂದ್ರದ ಪ್ರಮುಖರು, ಜಿಲ್ಲಾ ಮತ್ತು ತಾಲೂಕು ಪಧಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ: ಕಿಶೋರ್ ಕುಮಾರ್ ಶೆಟ್ಟಿ
