ವಿರಾಜಪೇಟೆ: ಪ್ರಗತಿ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ವಿರಾಜಪೇಟೆ: ಪ್ರಗತಿ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ವಿರಾಜಪೇಟೆ: ಇಲ್ಲಿನ ವಿದ್ಯಾನಗರದಲ್ಲಿರುವ ಪ್ರಗತಿ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರಗತಿ ಶಾಲೆಯ ವ್ಯವಸ್ಥಾಪಕರಾದ ತಿಮ್ಮಯ್ಯ ಮಾದಂಡ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಪ್ರಾಸ್ತವಿಕ ಭಾಷಣವನ್ನು ಸುಷ್ಮಾ ತಿಮ್ಮಯ್ಯ ಮಾಡಿದ ಅವರು, ಯೋಗ ದಿನದ ಹಾಗೂ ಯೋಗದ ಮಹತ್ವ ಬಗ್ಗೆ ತಿಳಿಸಿದರು. ಹಾಗೂ ಸಹ ಶಿಕ್ಷಕಿಯಾದ ಗೌತಮಿ ನೇತೃತ್ವದಲ್ಲಿ ಮಕ್ಕಳಿಗೆ ಯೋಗ ಕವಾಯತು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕ ವೃಂದದವರು ಹಾಜರಿದ್ದರು.