ಸಿದ್ದಾಪುರ:ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿ ಕಾಮಗಾರಿ ವಿಳಂಬ! ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಡ ಎ.ಎಸ್ ಪೊನ್ನಣ್ಣ

ಸಿದ್ದಾಪುರ:ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿ ಕಾಮಗಾರಿ ವಿಳಂಬ!  ಗುತ್ತಿಗೆದಾರರನ್ನು  ತರಾಟೆಗೆ ತೆಗೆದುಕೊಡ ಎ.ಎಸ್ ಪೊನ್ನಣ್ಣ
ಸಿದ್ದಾಪುರ:ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿ ಕಾಮಗಾರಿ ವಿಳಂಬ!  ಗುತ್ತಿಗೆದಾರರನ್ನು  ತರಾಟೆಗೆ ತೆಗೆದುಕೊಡ ಎ.ಎಸ್ ಪೊನ್ನಣ್ಣ

ಸಿದ್ದಾಪುರ:ಮಳೆಯಿಂದಾಗಿ ಹಾನಿಯಾದ ಸಿದ್ದಾಪುರ-ವಿರಾಜಪೇಟೆ ರಸ್ತೆಯನ್ನು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.    

ಈ ಮುಖ್ಯ ರಸ್ತೆಗೆ ಈಗಾಗಲೇ ಟೆಂಡರ್ ಆಗಿದ್ದು, ಕಾಮಗಾರಿ ವಿಳಂಬ ಆಗಿರುವುದಕ್ಕೆ ಅಧಿಕಾರಿಗಳನ್ನು ಮತ್ತು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಮಳೆಯ ಸಂದರ್ಭದಲ್ಲಿ ಡಾಂರೀಕರಣ ಕಾಮಗಾರಿ ಅಸಾಧ್ಯವಾಗಿರುವುದರಿಂದ ಜನಸಾಮಾನ್ಯರ ಓಡಾಟಕ್ಕೆ ತೊಂದರೆಯಾಗದಂತೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ಮೊದಲಿಗೆ ಗುತ್ತಿಗೆದಾರರು ಸ್ಥಳದಲ್ಲಿ ಇಲ್ಲದಿರುವುದನ್ನು ಗಮನಿಸಿ ಕೂಡಲೇ ಅವರನ್ನು ಕರೆಸಿದ ಶಾಸಕರು, ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕಾಮಗಾರಿ ವಿಳಂಬ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಮಾನ್ಯ ಶಾಸಕರು ಇನ್ನು 15 ದಿನಗಳ ಒಳಗಾಗಿ ರಸ್ತೆ ಬದಿಯ ಕರೆಂಟ್ ಕಂಬಗಳನ್ನು ಹಾಗೂ ಮೋರಿಯನ್ನು ಸಿದ್ಧಪಡಿಸುವುದರೊಂದಿಗೆ, ರಸ್ತೆಯ ಡಾಂಬರೀಕರಣ ಪ್ರಾರಂಭ ಮಾಡುವ ತನಕ, ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಆಗಿರುವಂತಹ ವ್ಯವಸ್ಥೆಯನ್ನು ಮಾಡಬೇಕೆಂದು ತಾಾಕೀತು ಮಾಡಿದರು.    

ಈ ಬಾರಿಯ ಮುಂಗಾರು ನಿಗದಿತ ಅವಧಿಗಿಂತ ಸುಮಾರು ಎರಡು ವಾರಗಳ ಮುಂಚಿತವಾಗಿಯೇ ಬಂದಿರುವುದರಿಂದ, ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ತೊಡಕಾಗಿರುವುದಾಗಿ ಅಧಿಕಾರಿಗಳು ಶಾಸಕರಲ್ಲಿ ಹೇಳಿಕೊಂಡರು. ಈ ವಿವರಣೆಯನ್ನು ಒಪ್ಪದ ಮಾನ್ಯ ಶಾಸಕರು, ಕಳೆದ ನವಂಬರ್ ನಲ್ಲಿ ಆರಂಭವಾದ ಈ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಶಾಸಕರು ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಿಕೊಂಡು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.   

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಸಿದ್ದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪ್ರತಿಷ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗು ಸ್ಥಳಿಯ ಪ್ರಮುಖರು ಉಪಸ್ಥಿತರಿದ್ದರು.