ಮಾಲ್ದಾರೆ:ಮರ ಬಿದ್ದು ಮೃತಪಟ್ಟ ಬೆಳ್ಳಿಯ್ಯಪ್ಪ ಮನೆಗೆ ಎ.ಎಸ್ ಪೊನ್ನಣ್ಣ

ಮಾಲ್ದಾರೆ:ಮರ ಬಿದ್ದು ಮೃತಪಟ್ಟ ಬೆಳ್ಳಿಯ್ಯಪ್ಪ ಮನೆಗೆ ಎ.ಎಸ್ ಪೊನ್ನಣ್ಣ

ಸಿದ್ದಾಪುರ: ತೀವ್ರ ಗಾಳಿ ಮಳೆಗೆ ಮಾಲ್ದಾರೆ ಗ್ರಾಮದಲ್ಲಿ ಮರ ಬಿದ್ದು ಮೃತಪಟ್ಟ ದುರ್ದೈವಿ ಪಿ.ಸಿ ಬೆಳ್ಳಿಯಪ್ಪ ರವರ ಮನೆಗೆ ಭೇಟಿ ನೀಡಿದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು, ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.   

 ಮನೆಯವರು ಶಾಸಕರಲ್ಲಿ ತಮ್ಮ ಅಳಲನ್ನು ತೋಡಿಕೊಂಡರು. ಮನೆಯವರಿಗೆ ಧೈರ್ಯ ಹೇಳಿದ ಶಾಸಕರು, ಅಗತ್ಯ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಜಿ ಪೂಣಚ್ಚ, ಸಿದ್ದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪ್ರತೀಶ್,ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.