ಭಾಗಮಂಡಲ: ಶ್ರೀ ಕಾವೇರಮ್ಮ ಕೊಡವ ಹಿತ ರಕ್ಷಣಾ ಚಾರಿಟೇಬಲ್ ಟ್ರಸ್ಟ್ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ
admincoorgdaily
ಮಡಿಕೇರಿ:ಶ್ರೀ ಕಾವೇರಮ್ಮ ಕೊಡವ ಹಿತ ರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾಗಮಂಡಲದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಸಭಾಭವನಕ್ಕೆ ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೂಮಿ ಪೂಜೆ ನೆರವೇರಿಸಿದರು.
ದಶಕಗಳಿಂದ ಕಾವೇರಮ್ಮ ಕೊಡವ ಚಾರಿಟೇಬಲ್ ಟ್ರಸ್ಟ್ ರವರು ಈ ಭಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ಪ್ರಯತ್ನಿಸಿದ್ದರು. ಇವರ ಮನವಿಗೆ ಸ್ಪಂದಿಸಿದ ಮಾನ್ಯ ಶಾಸಕರಾದ ಶ್ರೀ ಎ.ಎಸ್ ಪೊನ್ನಣ್ಣ ರವರು ಸರಕಾರದ ವತಿಯಿಂದ ₹ 1 ಕೋಟಿ ಅನುದಾನ ಒದಗಿಸಿ, ಇಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸಹಾಯ ಹಸ್ತ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಸದರಾದ ಯದುವೀರ್ ಒಡೆಯರ್,, ಮಾಜಿ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ವೀಣಾ ಅಚ್ಚಯ್ಯ, ಶ್ರೀ ಕಾವೇರಮ್ಮ ಕೊಡವ ಹಿತ ರಕ್ಷಣಾ ಚಾರಿಟೇಬಲ್ ಟ್ರಸ್ ನಾ ಅಧ್ಯಕ್ಷರು ಮುದ್ದಂಡ ದೇವಯ್ಯ, ಸದಸ್ಯರು, ಪದಾಧಿಕಾರಿಗಳು, ಅಹ್ವಾನಿತ ಗಣ್ಯರು, ನಾಪೋಕು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ವಲಯ ಅಧ್ಯಕ್ಷರು ವೆಂಕಟೇಶ್ ಕೋಳಿಬೈಲು, ಕೊಡವ ಫೆಡರೇಷನ್ ಅಧ್ಯಕ್ಷರು ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಅಮ್ಮ ಕೊಡವ ಸಮಾಜದ ಅಧ್ಯಕ್ಷರು ಶ್ರೀ ಬಾನಂಡ ಪ್ರತ್ಯು, ಪಂಚಾಯಿತಿ ಅಧ್ಯಕ್ಷರು, ಯುವ ಕಾಂಗ್ರೆಸ್ ನಾ ಗೌರೀಶ್ ,ಹಾಗೂ ಪ್ರಮುಖರು ಉಪಸ್ಥಿತರಿದ್ದರು.