ಹಿಂದುತ್ವದ ಹೆಸರು ಹೇಳುವ ನೈತಿಕತೆಯನ್ನು ಬಿರುನಾಣಿ ಕಾಂಗ್ರೆಸ್ ವಲಯಾಧ್ಯಕ್ಷ ಕಳೆದುಕೊಂಡಿದ್ದಾರೆ:ಬಿಜೆಪಿ‌ ಯುವಮೋರ್ಚ ಅಧ್ಯಕ್ಷ ನಾಮೇರ ಮೊಣ್ಣಪ್ಪ

Feb 24, 2026 - 16:32
 0  694
ಹಿಂದುತ್ವದ ಹೆಸರು ಹೇಳುವ ನೈತಿಕತೆಯನ್ನು ಬಿರುನಾಣಿ ಕಾಂಗ್ರೆಸ್ ವಲಯಾಧ್ಯಕ್ಷ ಕಳೆದುಕೊಂಡಿದ್ದಾರೆ:ಬಿಜೆಪಿ‌ ಯುವಮೋರ್ಚ ಅಧ್ಯಕ್ಷ ನಾಮೇರ ಮೊಣ್ಣಪ್ಪ

ಗೋಣಿಕೊಪ್ಪ: ಹಿಂದುತ್ವದ ಹೆಸರು ಹೇಳುವ ನೈತಿಕತೆಯನ್ನು ಬಂಟಿಂಗ್ಸ್ ಹರಿದು ಹಾಕಿ ಸಮರ್ಥನೆ ಮಾಡಿಕೊಳ್ಳುತ್ತಿರುವ ಬಿರುನಾಣಿ ಕಾಂಗ್ರೆಸ್ ವಲಯ ಅಧ್ಯಕ್ಷ ಕಳೆದುಕೊಂಡಿದ್ದಾರೆ ಎಂದು ವಿರಾಜಪೇಟೆ ತಾಲೂಕು ಯುವಮೋರ್ಚ ಅಧ್ಯಕ್ಷ ನಾಮೇರ ಮೊಣ್ಣಪ್ಪ ಆರೋಪಿಸಿದ್ದಾರೆ.

ಗೋಣಿಕೊಪ್ಪ ದುರ್ಗಾಬೋಜಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಪಕ್ಷದ ಕಾರ್ಯಕರ್ತರಾದ ಕುಪ್ಪಣ್ಣಮಾಡ ಬೋಪಣ್ಣ, ರಾಬಿನ್ ಅವರನ್ನು ದಾಳವಾಗಿ ಬಳಸಿಕೊಂಡು ಕೃತ್ಯವನ್ನು ಮರೆಮಾಚಲು ಲೇಪನ ಮಾಡುವ ವಿಚಾರಕ್ಕೆ ಕಥೆ ಕಟ್ಟುತ್ತಿರುವುದು ಅಧ್ಯಕ್ಷರ ಶೋಭೆಗೆ ಪ್ರಾಮುಖ್ಯತೆಯಾಗುತ್ತಿಲ್ಲ. ಈ ವಿಚಾರವನ್ನು ತೀವ್ರವಾಗಿ ಯುವ ಮೋರ್ಚ ಖಂಡಿಸುತ್ತದೆ ಎಂದರು.

ಕಾಂಗ್ರೆಸ್ ಪಕ್ಷದ ಹಿಂದುತ್ವದ ದ್ವೇಷ ಪ್ರತಿಯೊಬ್ಬರಿಗೂ ತಿಳಿದಿದೆ. ಬಿಜೆಪಿಯವರು ಹಿಂದುತ್ವವನ್ನ ಗುತ್ತಿಗೆ ಪಡೆದಿಲ್ಲ ಎಂಬ ಹೇಳಿಕೆಯನ್ನು ನೀಡುವ ಕಾಂಗ್ರೆಸ್ಸಿಗರು, ಈ ದೇಶದ ಬಗ್ಗೆ ಕಾಳಜಿ ಹೊಂದಿದ್ದಲ್ಲಿ ಮತ್ತು ಈ ಧರ್ಮದ ಬಗ್ಗೆ ಅಭಿಮಾನ ಹೊಂದಿದ್ದಲ್ಲಿ ಹಿಂದುತ್ವದ ಬಗ್ಗೆ ಕೆಲಸ ನಿರ್ವಹಿಸಲು ಯಾವುದೇ ಅಡೆತಡೆಗಳಿಲ್ಲ. ಅದಕ್ಕೆ ಬಿಜೆಪಿ ಮಾತ್ರ ಮುಂದೆ ನಿಲ್ಲಬೇಕು ಎಂಬ ನಿಯಮವೇನಿಲ್ಲ ಎಂದು ಹೇಳಿದರು.

ಈ ದೇಶದ ಸಂಸ್ಕೃತಿ ಪರಂಪರೆಗಳನ್ನು, ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ರಾಷ್ಟ್ರಾಭಿಮಾನವನ್ನು ಬಿತ್ತುವ ಕಾರ್ಯ ಬಿಜೆಪಿ ನಿರಂತರವಾಗಿ ಹಿಂದೂ ರಾಷ್ಟ್ರದ ಮುನ್ನಡೆಗಾಗಿ ನಡೆಸುತ್ತಿದೆ. ಈ ವಿಚಾರವಾಗಿ ಮತ್ತೊಂದು ಪಕ್ಷ ಹಿಂದುತ್ವದ ಉಪದೇಶ ನೀಡುವ ಅನಿವಾರ್ಯತೆ ಇಲ್ಲ. ನಿಜವಾಗಿಯೂ ಹಿಂದೂ ಧರ್ಮದ ಬಗ್ಗೆ ಕಾಳಜಿ ಇದ್ದಲ್ಲಿ ರಾತ್ರಿ ಹೀಗೊಂದು ಕೃತ್ಯ ನಡೆಸಲು ಮನಸು ಮಾಡುತ್ತಿರಲಿಲ್ಲ. ಎಷ್ಟೇ ಸಮರ್ಥನೆ ಮಾಡಿಕೊಂಡು ಸಾರ್ವಜನಿಕರು ಈ ವಿಚಾರವಾಗಿ ಮೂರ್ಖರಾಗಿಲ್ಲ, ಸತ್ಯಗಳನ್ನ ತಿಳಿದುಕೊಂಡಿದ್ದಾರೆ ಎಂದರು.

 ಬುರುಡೆ ವಿಚಾರಗಳನ್ನ ಜನರಡೆಗೆ ಬಿಡುವ ಮೊದಲು ಮತ್ತು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುವ ಮೊದಲು ಪ್ರಜ್ಞಾರಂತೆ ವರ್ತಿಸಿ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವುದು ಪ್ರಮುಖ್ಯತೆಯಾಗಲಿ ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಪಕ್ಷ ಘಟನೆಗೆ ಪೂರಕವಾಗಿ ಆರೋಪಿಸುತ್ತಿರುವ ರಾಬಿನ್ ಎಂಬ ವ್ಯಕ್ತಿ ಬಿಜೆಪಿ ಕಾರ್ಯಕರ್ತನಲ್ಲ. ಕಳೆದ ಮೂರು ವರ್ಷಗಳ ಹಿಂದೆಯೇ ಬಿಜೆಪಿಯನ್ನು ತೊರೆದು ಹೋಗಿದ್ದಾರೆೆ. ಬಹಿರಂಗವಾಗಿ ಈ ಬಾರಿ ಪೊನ್ನಣ್ಣ ಅವರಿಗೆ ಮತ ಹಾಕಿದ್ದೇನೆ ಎಂದು ಹೇಳುತ್ತಿದ್ದಾರೆ. ಹೀಗೆ ಬಹಳಷ್ಟು ಜನ ಗೆದ್ದೆತ್ತಿನ ಬಾಲ ಹಿಡಿದು ಕಾಂಗ್ರೆಸ್ಸಿನ ಹಿಂದೆ ಹೋಗಿದ್ದಾರೆ. ಅಂತವರು ಹೇಗೆ ಬಿಜೆಪಿ ಕಾರ್ಯಕರ್ತರಾಗುತ್ತಾರೆ ಎಂದು ಪ್ರಶ್ನಿಸಿದರು.

 ಕಾರ್ಯದರ್ಶಿ ಕಡೇಮಾಡ ಶರತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸಾದ್, ತಾಲೂಕು ಪ್ರದಾನ ಕಾರ್ಯದರ್ಶಿ ಗುಡ್ಡಮಾಡ ಪ್ರವೀಣ್ ಇದ್ದರು.

What's Your Reaction?

Like Like 3
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0