65 ವರ್ಷದ ವೃದ್ಧೆಯ ಮೇಲೆ ಹಲ್ಲೆ ಪ್ರಕರಣ: ಕೆ.ಎ ಹ್ಯಾರಿಸ್ ಮೇಲೆ ಪ್ರಕರಣ ದಾಖಲು
ನಾಪೋಕ್ಲು:ಸಮೀಪದ ಚೆರಿಯಪರಂಬು ಬೇತು ನಿವಾಸಿ ಪಿ.ಎ ಫಾತೀಮ (65) ಹಾಗೂ ಅವರ ಮಗ ಹ್ಯಾಷಿಮ್ ಅವರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಎ ಹ್ಯಾರಿಸ್ ಹಾಗೂ ಅವರ ಮಗ ರಿಯಾನ್ ಮೇಲೆ ನಾಪೋಕ್ಲು ಠಾಣೆಯಲ್ಲಿ 115(2),352,74 (3(5) ಬಿ.ಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರಾಗಿರುವ ಫಾತೀಮಾ ರವರು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ತುರ್ತು ಘಟಕದಲ್ಲಿ ದಾಖಲಾಗಿ ತನ್ನ ಮೇಲೆ ಹಲ್ಲೆಯ ನಡೆಸಿರುವ ಬಗ್ಗೆ ದೂರು ನೀಡಿದ್ದಾರೆ.
ಘಟನೆಯ ವಿವರ:
ನನ್ನ ಸೊಸೆ ಆರ್ಫಾನಳು ತನ್ನ ಚಿಕ್ಕಪ್ಪನ ಜೊತೆ ಮೊಬೈಲ್‌ನಲ್ಲಿ ಹೆಚ್ಚಾಗಿ ಮಾತಾನಾಡುತ್ತಿರುವ ಬಗ್ಗೆ ಮಗ ಹ್ಯಾಸಿಂ ಮತ್ತು ಸೊಸೆ ಅರ್ಫಾನಳ ನಡುವೆ ಆಗಿದ್ದಾಂಗೆ ಸಣ್ಣ ಪುಟ್ಟ ಜಗಳವಾಗುತ್ತಿತ್ತು. ನವೆಂಬರ್ ರಂದು ಮಧ್ಯಾಹ್ನ ನನ್ನ ಮಗನಾದ ಹೆಂಡತಿ ಅರ್ಫಾನಳನ್ನು ಕೆ.ಎ. ಹ್ಯಾರಿಸ್ ರವರ ಮಗ ರಿಯಾನ್ ತನ್ನ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದನು. ಈ ಬಗ್ಗೆ ಕೆ.ಎ. ಹ್ಯಾರಿಸ್‌ರವರಿಗೆ ನನ್ನ ಮಗ ಹ್ಯಾಸಿಂ ಕರೆ ಮಾಡಿ, ನಿಮ್ಮ ಮಗ ರಿಯಾನ್ ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗಿರುತ್ತಾನೆ.
ಏಕೆ ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗಿರುವುದು, ಏನಿದ್ದರೂ ಮಾತಾನಾಡಿಕೊಂಡು ತೀರ್ಮಾನ ಮಾಡೋಣ ಬನ್ನಿ ಎಂದಾಗ, ಆ ಸಮಯದಲ್ಲಿ ನಾನು ಸಹ ನನ್ನ ಮಗನ ಜೊತೆಯಲ್ಲಿಯೇ ಇದ್ದೆ. ಕೆ.ಎ. ಹ್ಯಾರಿಸ್ನು ನಿಲ್ಲು ಬರ್ತಿನಿ ನಿನಗೆ ಮಾಡಿಸ್ತೀನಿ ಎಂದು ಹೇಳಿ ಸ್ವಲ್ಪ ಸಮಯದಲ್ಲಿಯೇ,ಕೆ.ಎ. ಹ್ಯಾರಿಸ್ ಮತ್ತು ಅವನ ಮಗ ರಿಯಾನ್ ಕಾರು ಮತ್ತು ಬೈಕಿನಲ್ಲಿ ಬಂದು ನನ್ನ ಮಗ ಹ್ಯಾಸಿಂನ ಮನೆಯ ಹತ್ತಿರಕ್ಕೆ, ಸೊಸೆ ಅರ್ಫಾನಾಳೊಂದಿಗೆ ಬಂದು,ಮನೆಯ ಸಿಟೌಟ್‌ನಲ್ಲಿ ನನ್ನೊಂದಿಗೆ ಕುಳಿತಿದ್ದ ನನ್ನ ಮಗ ಹ್ಯಾಸಿಂ ನಿಗೆ, ಹ್ಯಾರಿಸ್ ರವರು ಬಂದು ಏಕಾಏಕಿ ಕೈಗಳಿಂದ ಮುಖಕ್ಕೆ ಹೊಡೆದಾಗ ಹ್ಯಾರಿಸ್ ಅವರ ಹ್ಯಾಸಿಂನನ್ನು ಹೊಡೆಯಲಾರಂಭಿಸಿದನು. ಆಗ ನಾನು ಅವರ ಮದ್ಯಕ್ಕೆ ಹೋಗಿ ಬಿಡಿಸಲು ಯತ್ನಿಸಿದಾಗ ರಿಯಾನ್ ನನ್ನ ಎದೆಯ ಬಾಗಕ್ಕೆ ಹೊಡೆದು ತಳ್ಳಿ ಬೀಳಿಸಿದನು.
ಆಗ ಹ್ಯಾರಿಸ್ ನನ್ನ ಅವಾಚ್ಯ ಪದಗಳಿಂದ ನಿಂದಿಸಿ ನೆಲದ ಮೇಲೆ ಬಿದ್ದಿದ್ದ ನನ್ನ ಹೊಟ್ಟೆಯ ಮೇಲೆ ಕಾಲಿನಿಂದ ಒದ್ದು ನೋವು ಪಡಿಸಿದನು. ನಾನು ಗಾಬರಿಯಲ್ಲಿ ನೋವಿನಿಂದ ಕಿರುಚಾಡುವುದನ್ನು ಕೇಳಿ ಅಲ್ಲಿಗೆ ಬಂದ ನನ್ನ ಮಗಳು ಹಸೀನಾ, ಸೊಸೆಯಂದಿರಾದ ಜೈನಬ, ಹಾಗೂ ಮತ್ತೊಬ್ಬ ಸೊಸೆ ರಶೀದರವರುಗಳು ನಮ್ಮನ್ನು ಬಿಡಿಸಿದಾಗ ಹ್ಯಾರಿಸ್ ನಿಮಗೆ ತೋರಿಸುತ್ತೇನೆ ನಿಮ್ಮನ್ನು ಜೈಲಿಗೆ ಕಳಿಹಿಸುತ್ತೇನೆ ಎಂದು ಬೆದರಿಕೆ ಹಾಕಿ ಅರ್ಫಾನಳನ್ನು ಕರೆದುಕೊಂಡು ಹೋಗಿದ್ದನು.
ಆದ್ದರಿಂದ ನನ್ನ ಸೊಸೆಯನ್ನು ಕರೆದುಕೊಂಡ ಹೋದ ವಿಚಾರವನ್ನು ಕೇಳಿದಕ್ಕೆ ನನ್ನ ಮಗ ಹ್ಯಾಸಿಂನ ಮನೆಗೆ ಬಂದು ಆತನಿಗೆ ಕೈಗಳಿಂದ ಹೊಡೆಯುತ್ತಿದ್ದದನ್ನು ಬಿಡಿಸಲು ಹೋದ ನನಗೆ ಹೊಡೆದು ಬಿಳಿಸಿ ಕಾಲಿನಿಂದ ಒದ್ದು ನೋವುಪಡಿಸಿ ಬೆದರಿಕೆ ಹಾಕಿರುವ ಕೆ.ಎ. ಹ್ಯಾರಿಸ್ ಮತ್ತು ಅವರ ಮಗ ರಿಯಾನ್ರವರ ಮೇಲೆ ಸೂಕ್ತ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
