ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ನಾಪೋಕ್ಲು ಯುವಕನ ಮೇಲೆ ದೂರು; ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು

Jan 24, 2026 - 13:02
 0  3.1k
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ನಾಪೋಕ್ಲು ಯುವಕನ ಮೇಲೆ ದೂರು;   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು

ಮಡಿಕೇರಿ; ಸಾಮಾಜಿಕ ಜಾಲತಾಣದಲ್ಲಿ ಕೊಡಗಿನ ಯುವಕನೊಬ್ಬ ವಿವಿಧ ಹುಡುಗಿಯರೊಂದಿಗೆ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸಿ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಕೊಡಗು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಡಿಕೇರಿಯ ಪ್ರಸನ್ನ ಭಟ್ ಎಂಬುವರು ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿ ತನಿಖೆ ನಡೆಸಿ ಆ ವ್ಯಕ್ತಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ದೂರಿನ ವಿವರ; Act & Section: THE BHARATIYA NYAYA SANHITA (BNS), 2023 (U/s-79,294); INFORMATION TECHNOLOGY ACT 2008 (U/s-67,67 (A),67(E)) F I R Contents ಈ ದಿನ ದಿನಾಂಕ 22/01/2026 ರಂದು ಸಮಯ 13.00 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ ಎಂ. ಎಸ್ ಪ್ರಸನ್ನ ಭಟ್ ಎಂಬುವವರು ನೀಡಿದ ಪುಕಾರೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ಕೊಡಗು ಅಭಿವೃದ್ಧಿ ಸಮಿತಿಯಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುತ್ತೇನೆ. ದಿನಾಂಕ 21/01/2026 ರಂದು ನನ್ನ ವೈಯಕ್ತಿಕ ಮೊಬೈಲ್ ಸಂಖ್ಯೆ 9739258868 ಗೆ ನಾಪೋಕ್ಲು ನಿವಾಸಿ ಹ್ಯಾರೀಸ್ ಎಂಬುವವರು ಅವರ ಮೊಬೈಲ್ ನಂ 990228552 ರಿಂದ ವ್ಯಾಟ್ಸಾಪ್ ಮೂಲಕ ವೀಡೀಯೊ ತುಣುಕುಗಳನ್ನು ಕಳುಹಿಸಿದ್ದು ಅದನ್ನು ಸಮಯ ಬೆಳಗ್ಗೆ 10:00 ಗಂಟೆಯಲ್ಲಿ ನೋಡಲಾಗಿ ಒಬ್ಬ ವ್ಯಕ್ತಿಯು ಇಬ್ಬರು ಬೇರೆಬೇರೆ ಹುಡುಗಿಯರೊಂದಿಗೆ ಬೇರೆಬೇರೆ ಸಮಯದಲ್ಲಿ ಲೈಂಗಿಕ ಕ್ರಿಯೆ ಮಾಡುತ್ತಿರುವ ಅಶ್ಲೀಲ ದೃಶ್ಯಗಳು ಹಾಗೂ ಹುಡುಗಿಯರಿಗೆ ಮುತ್ತಿಕ್ಕುತ್ತಿರುವ ಹಾಗೂ ಅಶ್ಲೀಲ ದೃಶ್ಯಗಳನ್ನು ಸ್ವತಃ ತಾವೇ ವಿಡಿಯೋ ಮತ್ತು ಫೋಟೋ ತೆಗೆಸಿಕೊಂಡು ಕಳುಹಿಸಿರು ಫೋಟೋ, ವೀಡೀಯೋದಂತಿದ್ದು ಸದರಿ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವಂತೆ ಕಂಡುಬಂದಿರುತ್ತದೆ.

ಸದರಿಯವರ ವಿಳಾಸವನ್ನು ನಂತರದಲ್ಲಿ ತಿಳಿಯಲಾಗಿ ಮೊಹಮ್ಮದ್ ಸವಾದ್ ತಂದೆ ಸಂಶುದ್ದೀನ್ ಪ್ರಾಯ 21 ವರ್ಷ, ಬಿ.ಬಿ.ಎ ವಿದ್ಯಾರ್ಥಿ ಎನಪೋಯ ಕಾಲೇಜು ಸಂಪಿಗೆಹಳ್ಳಿ ಬೆಂಗಳೂರು, ಖಾಯಂ ವಿಳಾಸ ನಾಪೋಕ್ಲು ಎಂಬುದಾಗಿ ತಿಳಿದುಬಂದಿರುತ್ತದೆ. ಆದುದರಿಂದ ಹುಡುಗಿಯರೊಂದಿಗೆ ಲೈಂಗಿಕ ಕ್ರಿಯೆ ಮಾಡುತ್ತಿರುವ ಅಶ್ಲೀಲ ದೃಶ್ಯಗಳು ಹಾಗೂ ಹುಡುಗಿಯರಿಗೆ ಮುತ್ತಿಕ್ಕುತ್ತಿರುವ ಹಾಗೂ ಇನ್ನಿತರ ಅಶ್ಲೀಲ ದೃಶ್ಯಗಳನ್ನು ಸ್ವತಃ ತಾವೇ ವಿಡಿಯೋ ಮತು ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಮೊಹಮ್ಮದ್ ಸವಾದ್ ಮತ್ತು ಇತರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ಲಿಖಿತ ಪುಕಾರಿಗೆ ತಯಾರಿಸಿದ ಪ್ರ. ವ. ವರದಿ.

What's Your Reaction?

Like Like 2
Dislike Dislike 0
Love Love 1
Funny Funny 4
Angry Angry 7
Sad Sad 0
Wow Wow 3