Kodagu

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಒಬ್ಬ ನೈಜ ಮತದಾರನ ಹೆಸರೂ ಕೈಬಿಡಬಾರದು ಎಂಬುದೇ ಕಾಂಗ್ರೆಸ್‌ನ ಆದ್ಯತೆ; ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್

admincoorgdaily

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಒಬ್ಬ ನೈಜ ಮತದಾರನ ಹೆಸರೂ ಕೈಬಿಡಬಾರದು ಎಂಬುದೇ ಕಾಂಗ್ರೆಸ್‌ನ ಆದ್ಯತೆ; ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್

ಮಡಿಕೇರಿ: ಮತದಾರರ ಪಟ್ಟಿ ಪರಿಷ್ಕರಣೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಒಬ್ಬ ನೈಜ ಮತದಾರನ ಹೆಸರೂ ಕೈಬಿಡಬಾರದು ಎಂಬುದೇ ಕಾಂಗ್ರೆಸ್‌ನ ಆದ್ಯತೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ಸ್ಪಷ್ಟಪಡಿಸಿದರು.

 ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಎಸ್‌ಐಆರ್‌ಗೆ ವಿರೋಧವಿಲ್ಲ. ಆದರೆ ಪ್ರಕ್ರಿಯೆ ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿರಬೇಕು. ೨೦೧೫-೧೬ರಲ್ಲಿ ಆಗಬೇಕಿದ್ದ ಕೆಲಸ ಈಗ ನಡೆಯುತ್ತಿದೆ. ಬೇರೆ ರಾಜ್ಯಗಳ ಅನುಭವದಿಂದ ಪಾಠ ಕಲಿತು ಕರ್ನಾಟಕದಲ್ಲಿ ಮುಂಜಾಗ್ರತೆ ವಹಿಸಲಾಗಿದೆ ಎಂದು ಹೇಳಿದರು. ಪ್ರತಿ ಬೂತ್‌ನಲ್ಲೂ ಕಾಂಗ್ರೆಸ್‌ನಿಂದ ಬಿಎಲ್‌ಎಗಳನ್ನು ನೇಮಿಸಲಾಗಿದೆ. ಮತದಾರರ ನೆರವು ಕೇಂದ್ರ ಮತ್ತು ಬಿಎಲ್‌ಒ ಸಹಾಯ ಕೇಂದ್ರಗಳ ಸಂಖ್ಯೆ ಹೆಚ್ಚಿಸಬೇಕೆಂದು ಸಲಹೆ ನೀಡಿದರು.

ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಎನ್ಯುಮರೇಷನ್ ಫಾರಂ ಸರಳವಾಗಿರಬೇಕು, ಗೊಂದಲ ಮೂಡಬಾರದು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಮಂಜುನಾಥ್ ಗುಂಡೂರಾವ್, ಚಂದ್ರಮೌಳಿ, ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಟ್ಟಮುಡಿ ಹಂಸ, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್ ಮುಖರಾದ ನವೀನ್, ತೆನ್ನೀರಾ ಮೈನಾ ಇದ್ದರು.