State News

38ರ ಪ್ರಾಯದ ಮಹಿಳೆಯ ಪ್ರೇಮ ಕಾಟ ತಾಳಲಾರದೆ 19ರ ಯುವಕ ಮಾಡಿದ್ದೇನು ಗೊತ್ತಾ!

admincoorgdaily

ಚಿಕ್ಕಬಳ್ಳಾಪುರ, ನ.5: ಅಕ್ರಮ ಸಂಬಂಧಕ್ಕಾಗಿ ಪದೇಪದೇ ಕಾಡುತ್ತಿದ್ದ 38 ವರ್ಷದ ಮಹಿಳೆಯ ಕಾಟ ತಾಳಲಾರದೆ 19ರ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಮೂಡಚಿಂತಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ನಿಖಿಲ್ ಕುಮಾರ್ (19) ಎಂದು ಗುರುತಿಸಲಾಗಿದೆ. ಶಾರದಾ (38) ಎಂಬ ವಿವಾಹ ವಿಚ್ಛೇದಿತೆಯೊಂದಿಗೆ ನಿಖಿಲ್‌ನ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಇಬ್ಬರು ಮಕ್ಕಳ ತಾಯಿಯಾದ ಶಾರದಾ ಯುವಕನೊಂದಿಗೆ ನಂಟು ಮುಂದುವರಿಸಲು ನಿರಂತರ ಒತ್ತಾಯ ಮಾಡುತ್ತಿದ್ದಳು ಎಂದು ಕುಟುಂಬದವರು ಆರೋಪಿಸಿದ್ದಾರೆ.

ಪೋಷಕರ ವಿರೋಧದ ನಡುವೆಯೂ ಶಾರದಾ ಯುವಕನನ್ನು ಬಿಟ್ಟುಬಿಡದೆ, ಹಲವು ಬಾರಿ ಮನೆಗೆ ಕರೆದುಕೊಂಡು ಹೋಗುತ್ತಿದ್ದಳು ಎಂಬ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ ಮನಸ್ತಾಪಗೊಂಡ ನಿಖಿಲ್ ಕಾಚಹಳ್ಳಿ ಕೆರೆ ಬಳಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತನ ಪೋಷಕರು ಶಾರದಾ ವಿರುದ್ಧ ದೂರು ನೀಡಿದ್ದು, ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.