ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ವತಿಯಿಂದ ಪರಿಸರ ಮಾಹಿತಿ ಕಾರ್ಯಕ್ರಮ
ವಿರಾಜಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ) ವಿರಾಜಪೇಟೆ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಿತಿಮತಿ ಪರಿಸರ ಮಾಹಿತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ ವಿಠ್ಠಲ್ ಶಿವಪ್ಪ ಸಾಲಿಯಾನ್ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿನಮ್ಮ ಪರಿಸರದಲ್ಲಿರುವ ಔಷಧಿ ಗಿಡಗಳ ಬಗ್ಗೆ ಮನುಷ್ಯ ಮತ್ತು ಪ್ರಾಣಿಗಳು ಬದುಕಬೇಕಾದರೆ ಪರಿಸರ ಅತಿ ಮುಖ್ಯವಾಗಿರುತ್ತದೆ, ಶಾಲೆಯ ಪರಿಸರದಲ್ಲಿ ಗಿಡಗಳನ್ನು ನೆಡುವುದು ನಮ್ಮ, ಮನೆಯ ಸುತ್ತಮುತ್ತ ಗಿಡ ನೆಡುವುದು ಇವತ್ತಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ಮಾಡೋದು ಅನಿವಾರ್ಯ ಇದೆ. ನಾವುಪರಿಸರ ಸಂರಕ್ಷಣೆ ಮಾಡಿಕೊಂಡು ಬರಬೇಕು ನಮ್ಮ ಪರಿಸರವನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು ಎಂದು ಅರ್ಥಪೂರ್ಣವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಿತಿಮತಿ ಮುಖ್ಯ ಶಿಕ್ಷಕಿ ಪಾರ್ವತಿ, ಒಕ್ಕೂಟದ ಅಧ್ಯಕ್ಷರಾದ ಶೇಖರ್, ತಿತಿಮತಿ ಗ್ರಾಮ ಪಂಚಾಯತ್ ಸದಸ್ಯರಾದ ಅನೂಪ್ ಕುಮಾರ, ಸೇವಾ ಪ್ರತಿನಿಧಿ ಸರೋಜಾ, ವಲಯ ಮೇಲ್ವಿಚಾರಕರಾದ ಗೀತಾ, ಈ ಶೌರ್ಯ ವಿಪತ್ತು ತಂಡದ ಸದಸ್ಯರು. ಕೃಷಿ ಮೇಲ್ವಿಚಾರಕರಾದ ವಸಂತ್. ಶಾಲೆಯ ಶಿಕ್ಷಕ ವೃಂದದವರು, ಕಾರ್ಯಕ್ರಮದ ಕೇಂದ್ರ ಬಿಂದುವಾದ ಮಕ್ಕಳು ಉಪಸ್ಥಿತರಿದ್ದರು
ಪರಿಸರದ ಬಗ್ಗೆ ಏರ್ಪಡಿಸಲಾದ ಪ್ರಬಂಧ, ಚಿತ್ರಕಲೆ, ಎಲೆಗಳನ್ನು ಗುರುತಿಸುವುದು ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗಿತ್ತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
