ಡಾ.ಕೆ.ಬಿ. ಸೂಯ೯ಕುಮಾರ್ ಅವರಿಗೆ ಬಿ.ಎಸ್. ಗೋಪಾಲಕೖಷ್ಣ ದತ್ತಿ ಪ್ರಶಸ್ತಿ ಪ್ರದಾನ; ಲೇಖಕರನ್ನು ಪ್ರೋ್ತ್ಸಾಹಿಸುವ ಕಾಯ೯ ನಿರಂತರವಾಗಿರಬೇಕು - ಬಾಲಸುಬ್ರಹ್ಮಣ್ಯ ಕಂಜಪ೯ಣೆ
ಮಡಿಕೇರಿ ಫೆ.20 - ಬರಹಗಾರರನ್ನು ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ಕೊಡಗಿನಲ್ಲಿ ನಡೆಯಬೇಕು.ಆ ಮೂಲಕ ಬರಹಗಾರರು ಎಲ್ಲೆಡೆ ಗುರುತಿಸಿಕೊಳ್ಳುವಂತಾಗಬೇಕು ಎಂದು ಹಿರಿಯ ಸಾಹಿತಿ ಬಾಲಸುಬ್ರಹ್ಮಣ್ಯ ಕಂಜಪ೯ಣೆ ಹೇಳಿದ್ದಾರೆ.
ನಗರದ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೊಡಗು ಪತ್ರಕತ೯ರ ಸಂಘದ ಸಹಯೋಗದಲ್ಲಿ ಆಯೋಜಿತ ಶಕ್ತಿ ಪತ್ರಿಕೆಯ ಸ್ಥಾಪಕರಾದ ಬಿ.ಎಸ್. ಗೋಪಾಲಕೖಷ್ಣ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ.ಕೆ.ಬಿ. ಸೂಯ೯ ಕುಮಾರ್ ಅವರಿಗೆ ವೈದ್ಯ ಕಂಡ ವಿಸ್ಮಯ ಕೖತಿಗಾಗಿ ಪ್ರಶಸ್ತಿ ಪ್ದಾನ ಮಾಡಿ ಅವರು ಮಾತನಾಡಿದರು.
ಕೖತಿ, ಲೇಖನ ರಚನೆಗೆ ವಯಸ್ಸಿನ ನಿಭ೯ಂಧ ಇಲ್ಲ. ಯಾವುದೇ ವಯಸ್ಸಿನಲ್ಲಿಯೂ ಉತ್ತಮ ಲೇಖನ, ಕೖತಿ ರಚನೆ ಸಾಧ್ಯವಿದೆ. ಸೂಯ೯ಕುಮಾರ್ ಅವರೇ ಈ ಮಾತಿಗೆ ಉತ್ತಮ ನಿದಶ೯ನವಾಗಿದ್ದಾರೆ ಎಂದೂ ಬಾಲಸುಬ್ರಹ್ಮಣ್ಯ ಕಂಜಪ೯ಣೆ ಹೇಳಿದರು. ಹಿರಿಯ ಸಾಹಿತಿ ಬಿ.ಎ. ಷಂಶುದ್ದೀನ್ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿ,
ಶಕ್ತಿ ಪತ್ರಿಕೆ ಪ್ರಭಾವಶಾಲಿ ಪತ್ರಿಕೆಯಾಗಿದ್ದರೂ ಕೂಡ ಅದನ್ನು ಎಂದೂ ಕೂಡ ತಮ್ಮ ಸ್ವಾರ್ಥಕ್ಕಾಗಿ ಅಥವಾ ಸ್ವಯಂ ಲಾಭಕ್ಕಾಗಿ ಗೋಪಾಲಕೖಷ್ಣ ಅವರು ಬಳಸಿಕೊಳ್ಳಲಿಲ್ಲ.ತಾನು ಶಕ್ತಿಯಲ್ಲಿ ಉಪಸಂಪಾದಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಗೋಪಾಲಕೃಷ್ಣ ಹಾಗೂ ಅವರ ಹಿರಿಯ ಪುತ್ರ ಯದುಮಣಿ ಅವರು ತನ್ನೊಳಗೆ ಕನ್ನಡ ಭಾಷೆಯ ಜ್ಞಾನವನ್ನು ತುಂಬಿದ ಗುರುಗಳಾಗಿದ್ದಾರೆ ಎಂದು ಸ್ಮರಿಸಿದರು.
ನಾಟಕ ನಿರ್ದೇಶಕರೂ ಕೊಡಗುಗೈ ದಾನಿಗಳೂ ಆಗಿದ್ದ ಗೋಪಾಲಕೃಷ್ಣ ಅವರು ತಮ್ಮ ನೇರ ಹಾಗೂ ನಿಷ್ಟೂರ ಬರಹಗಳ ಮೂಲಕ ಕೊಡಗಿನ ಒಳಿತಿಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಮಾಡಿದ್ದರು.ವಾರ ಪತ್ರಿಕೆ ಸಂಜೆ ಪತ್ರಿಕೆ ಮಾಸ ಪತ್ರಿಕೆಗಳನ್ನೂ ಗೋಪಾಲಕೃಷ್ಣ ಅವರು ನಡೆಸಿದ್ದರು.ಕೊಡಗಿನ ಜನರಿಗಾಗಿಯೆ ಪತ್ರಿಕೆಯನ್ನು ಮುನ್ನಡೆಸಿದ ಪತ್ರಕರ್ತ ಗೋಪಾಲಕೃಷ್ಣ ಅವರ ಬದುಕು ಈಗಿನ ಪತ್ರಕರ್ತರಿಗೆ ಮಾದರಿಯಾಗಬೇಕು ಎಂದು ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಬಿಎಸ್ ಗೋಪಾಲಕೃಷ್ಣ ಅವರು ವೃತ್ತಿಯಲ್ಲಿ ಪತ್ರಿಕೋದ್ಯಮಿಯಾಗಿ ನೇರ ಹಾಗೂ ನಿಷ್ಟೂರವಾದಿ ವ್ಯಕ್ತಿತ್ವದವರಾಗಿದ್ದರು.ಅಬ್ಬಿ ಜಲಪಾತ ಬಳಿ ನಡೆದಿದ್ದ ಸಿದ್ದರಾಜು ಕೊಲೆ ಪ್ರಕರಣಕ್ಕೆ ನ್ಯಾಯ ಒದಗಿಸುವಲ್ಲಿ, ಕೊಡಗಿಗೆ ಮಾರಕವಾಗಬಹುದಾಗಿದ್ದ ,ಕಂಬದ ಕಡ ಯೋಜನೆ ವಿರುದ್ಧದ ಹೋರಾಟದಲ್ಕಿ ಶಕ್ತಿ ಗೋಪಾಲಕೖಷ್ಣ ಅವರು ಮಹತ್ವದ ಪಾತ್ರ ವಹಿಸಿದ್ದರು. ಕೊಡಗಿನ .ಪತ್ರಿಕೋದ್ಯಮದಲ್ಲಿ ಬಿಎಸ್ ಜಿ ಅವರ ವೖತ್ತಿ ಸೇವೆ ಸದಾ ಸ್ಮರಣೀಯವಾದದ್ದು.ಎಂದು ಬಣ್ಣಿಸಿದರು.
ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ; ಮಾತನಾಡಿ, ಗೋಪಾಲಕೃಷ್ಣ ಅವರು ಪರರ ಕಷ್ಟಗಳಿಗೆ ಸ್ಪಂದಿಸುವ ಗುಣದವರಾಗಿದ್ದರು.ತೀಕ್ಷ್ಣವಾದ ಬರಹಗಳಹ ಅವರ ಸಾಮರ್ಥ್ಯವಾಗಿತ್ತು.ಅಧ್ಯಾತ್ಮ ಹಾಗೂ ಗಮಕದಲ್ಲಿ ಸಾಧಕರಾಗಿದ್ದ ಗೋಪಾಲಕೃಷ್ಣ ಅವರು ಪತ್ರಿಕೋದ್ಯಮದಲ್ಲಿ ಭೀಷ್ಮ ಎಂದು ಖ್ಯಾತರಾದವರು.ಬಹುಮುಖ ವ್ಯಕ್ತಿತ್ವದ ಅವರು ಬಹಳಷ್ಟು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.
ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡಿ, ಪ್ರತಿಯೊಂದು ವಿಚಾರದಲ್ಲೂ ಅಚ್ಚುಕಟ್ಟುತನ ಕಾಪಾಡಿಕೊಳ್ಳಲು ಗೋಪಾಲಕೃಷ್ಣ ಅವರು ಒತ್ತು ನೀಡುತ್ತಿದ್ದರು. ಬದುಕಿನುದ್ದಕ್ಕೂ ಶಿಸ್ತು ಸಮಯ ಪಾಲನೆಯೆ ಅವರ ಆದ್ಯತೆಯಾಗಿತ್ತು ಎಂದರು. ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಪ್ರತೀ ವೈದ್ಯನಲ್ಲಿಯೂ ಬರಹಗಾರನಿದ್ದಾನೆ. ಆದರೆ ವೈದ್ಯರ ಬರಹ ಔಷಧಿ ವ್ಯಾಪಾರಿಸ್ಥ ಎಂಬ ಮಾತಿದೆ.
ವೈದ್ಯನೋವ೯ ಲೇಖಕನೂ ಆದಾಗ ಅವರೊಳಗಿನ ಅನೇಕ ವಿಚಾರಗಳ ಜ್ಞಾನ ಓದುಗನಿಗೂ ನಿಲುಕುತ್ತದೆ. ಇದಕ್ಕೆ ಡಾ.ಸೂಯ೯ಕುಮಾರ್ ಅವರ ವೈದ್ಯಕೀಯ ಕ್ಷೇತ್ರದ ಕುರಿತ ಕುತೂಹಲಕಾರಿ ಕೖತಿಗಳೇ ಉದಾಹರಣೆಯಾಗಿದೆ ಎಂದು ಹೆಮ್ಮೆಯಿಂದ ನುಡಿದರು. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಪುರುಷ ಲೇಖಕರಿಗಾಗಿಯೆ ಇರುವಂತಹ ಪ್ರತಿಷ್ಟಿತ ಗೋಪಾಲಕೃಷ್ಣ ದತ್ತಿ ಪ್ರಶಸ್ತಿಯನ್ನು ಪಡೆಯಲು ಪುರುಷ ಲೇಖಕರು ಅತ್ಯುತ್ತಮ ಕೖತಿಗಳ ಮೂಲಕ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು ಬರಹಗಳ ಮೂಲಕ ಪ್ರಯತ್ನಿಸಬೇಕೆಂದರು.
ಪ್ರಶಸ್ತಿ ಸ್ವೀಕರಿಸಿದ ಲೇಖಕ ಡಾ.ಕೆ.ಬಿ. ಸೂರ್ಯಕುಮಾರ್ ಮಾತನಾಡಿ, ; ಶಕ್ತಿ ಕೊಡಗಿನ ಜನರ ಅವಿಭಾಜ್ಯ ಅಂಗವಾಗಿದೆ ಎಂದರಲ್ಲದೇ, . ಲೇಖಕನಿಗೆ ಓದುಗರೇ ದೇವರು.ಓದುಗರು ಮೆಚ್ಚಿದರೆ ಮಾತ್ರ ಲೇಖಕ ಬೆಳೆಯಲು ಸಾಧ್ಯ ಎಂದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್;ವೈದ್ಯ ಕಂಡ ವಿಸ್ಮಯ ಕೃತಿ ಇತರ ವೈದ್ಯರುಗಳಿಗೆ ಸ್ಪೂರ್ತಿಯಾಗಲಿ,ಇತರ ವೈದ್ಯರುಗಳು ಕೂಡ ಸೂರ್ಯಕುಮಾರ್ ಅವರಂತೆ ಸಾಹಿತ್ಯದತ್ತ ಒಲವು ತೋರುವಂತಾಗಲಿ ಎಂದರು.
ಪ್ರಶಸ್ತಿ ಪ್ರಧಾನ ಸಂದಭ೯ ಗೀತಾ ಸೂಯ೯ಕುಮಾರ್, ರಾಜಲಕ್ಷ್ಮಿ ಗೋಪಾಲಕೖಷ್ಣ, ಶಕ್ತಿ ಸಂಪಾದಕ ಜಿ.ಚಿದ್ವಿಲಾಸ್ ವೇದಿಕೆಯಲ್ಲಿದ್ದರು. ಕಾಯ೯ಕ್ರಮದಲ್ಲಿ ಜಿಲ್ಲೆಯಾದ್ಯಂತಲಿನ ಸಾಹಿತ್ಯಾಭಿಮಾನಿಗಳು ಪಾಲ್ಗೊಂಡಿದ್ದರು. ವಿದೂಷಿ ಮೇಘಾಭಟ್ ಮಾಗ೯ದಶ೯ನದಲ್ಲಿ ವಿದ್ಯಾಥಿ೯ಗಳು ನಾಡಗೀತೆ ಹಾಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾಯ೯ದಶಿ೯ ಪುದಿನೆರವನ ರೇವತಿ ರಮೇಶ್ ಸ್ವಾಗತಿಸಿ, ಪರಿಷತ್ ಖಜಾಂಚಿ ಎಸ್.ಎಸ್. ಸಂಪತ್ ಕುಮಾರ್ ಅತಿಥಿ ಪರಿಚಯ ಮಾಡಿದ ಕಾಯ೯ಕ್ರಮದಲ್ಲಿ ಪತ್ರಕತ೯ರ ಸಂಘದ ನಿದೇಶಕ ಉಜ್ವಲ್ ರಂಜಿತ್ ವಂದಿಸಿದರು.
ಸ್ಪಧೆ೯ಯ ತೀಪು೯ಗಾರರಾಗಿ ಸುಬ್ರಾಯ ಸಂಪಾಜೆ, ಪ್ರತಿಮಾಹರೀಶ್ ರೈ, ರಜನಿ ಅವರು ಕಾಯ೯ನಿವ೯ಹಿಸಿದ್ದರು.
ರಸ್ತೆಗೆ ಗೋಪಾಲಕೖಷ್ಣ ಹೆಸರು; ಕೊಡಗಿನ ಪತ್ರಿಕೋದ್ಯಮದ ಕ್ಷೇತ್ರದ ಭೀಷ್ಮ ಎಂದೇ ಹೆಸರಾದ ಬಿ.ಎಸ್. ಗೋಪಾಲಕೃಷ್ಣ ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಕೊಡಗು ಪತ್ರಕರ್ತರ ಸಂಘದ ನಿರಂತರ ಪ್ರಯತ್ನದ ಫಲವಾಗಿ ಮಡಿಕೇರಿಯ ಕೈಗಾರಿಕಾ ಬಡಾವಣೆಯ ಮುಖ್ಯ ರಸ್ತೆಗೆ ಗೋಪಾಲಕೃಷ್ಣ ಅವರ ಹೆಸರಿಡಲು ನಗರಸಭೆಯಿಂದ ಅನುಮತಿ ದೊರೆತಿದ್ದು,ಮಾರ್ಚ್ 4 ರ ಶಕ್ತಿ ಪತ್ರಿಕೆ ಹುಟ್ಟು ಹಬ್ಬದಂದು ಬೆಳಿಗ್ಗೆ 11 ಗಂಟೆಗೆ ಆ ರಸ್ತೆಗೆ ಬಿಎಸ್ ಜಿ ಹೆಸರಿಡುವ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಅನಿಲ್ ಹೆ್ಚ್.ಟಿ. ಮಾಹಿತಿ ನೀಡಿದರು.