ಡಾ. ಕೃತಿಕಾ ಕೋಮಾಗೆ ಜಾರಿದಾಗ ಅದೇ ರೂಮಿನಲ್ಲಿದ್ದ ಅನಸ್ತೇಷಿಯಾ ನೀಡಿದ್ದ ಪತಿ ಡಾ.ಮಹೇಂದ್ರ ರೆಡ್ಡಿ : ತುರ್ತು ಚಿಕಿತ್ಸೆ ನೀಡದೇ ಹೆಂಡತಿಯ ಅಂತಿಮ ಕ್ಷಣಗಳನ್ನು ನೋಡುತ್ತಾ ಕುಳಿತನೇ ಪತ್ನಿ ಹಂತಕ?

Oct 21, 2025 - 14:41
 0  1.6k
ಡಾ. ಕೃತಿಕಾ ಕೋಮಾಗೆ ಜಾರಿದಾಗ ಅದೇ ರೂಮಿನಲ್ಲಿದ್ದ ಅನಸ್ತೇಷಿಯಾ ನೀಡಿದ್ದ ಪತಿ ಡಾ.ಮಹೇಂದ್ರ ರೆಡ್ಡಿ :  ತುರ್ತು ಚಿಕಿತ್ಸೆ ನೀಡದೇ ಹೆಂಡತಿಯ ಅಂತಿಮ ಕ್ಷಣಗಳನ್ನು ನೋಡುತ್ತಾ ಕುಳಿತನೇ ಪತ್ನಿ ಹಂತಕ?
Photo credit: Decan herald

ಬೆಂಗಳೂರು, ಅ. 21: ವೈದ್ಯೆ ಡಾ. ಕೃತಿಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಪತಿ ಡಾ.ಮಹೇಂದ್ರ ರೆಡ್ಡಿ, ಪತ್ನಿಗೆ ನೀಡಿದ ಪ್ರೊಪೋಪೋಲ್ ಅನಸ್ತೇಷಿಯಾ ಮಾರಕ ಔಷಧಿಯ ಮೂಲ ಪತ್ತೆಹಚ್ಚಿದ್ದು, ಮಹೇಂದ್ರ ರೆಡ್ಡಿ ಅಕ್ರಮವಾಗಿ ಔಷಧಿ ಖರೀದಿಸಿದ್ದಾನೆ ಎಂಬ ಸಂಗತಿ ಬಹಿರಂಗವಾಗಿದೆ.

ಮಾರತ್‌ಹಳ್ಳಿ ಠಾಣೆಯ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ತಂಡ ನಡೆಸಿದ ಸುದೀರ್ಘ ವಿಚಾರಣೆಯಲ್ಲಿ ಮಹೇಂದ್ರ ರೆಡ್ಡಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾನೆ. ಆತ ಮೆಡಿಕಲ್ ಅಂಗಡಿಗೆ ತೆರಳಿ “ನಾನು ಸರ್ಜನ್, ತುರ್ತು ಚಿಕಿತ್ಸೆಗೆ ಔಷಧಿ ಅಗತ್ಯ” ಎಂದು ಹೇಳಿ ಪ್ರಿಸ್ಕ್ರಿಪ್ಶನ್ ತೋರಿಸಿ ಪ್ರೊಪೋಪೋಲ್ ಇಂಜೆಕ್ಷನ್ ಖರೀದಿಸಿದ್ದಾಗಿ ಹೇಳಿದ್ದಾನೆ.

 ಮೆಡಿಕಲ್ ಅಂಗಡಿಯವರು ಈ ಔಷಧಿ ಸಾಮಾನ್ಯರಿಗೆ ಮಾರಾಟಕ್ಕೆ ಇಲ್ಲ ಎಂದು ಹೇಳಿದ್ದರೂ, ವೈದ್ಯರ ಪ್ರಿಸ್ಕ್ರಿಪ್ಶನ್‌ನ ಆಧಾರದಲ್ಲಿ ಔಷಧಿ ನೀಡಲಾಗಿತ್ತು ಎಂದು ತಿಳಿದು ಬಂದಿದೆ.

 ಮಹೇಂದ್ರ ರೆಡ್ಡಿ ಮನೆಯಲ್ಲಿ ಪತ್ನಿಗೆ ಐವಿ ಲೈನ್ ಮೂಲಕ ಪ್ರೊಪೋಪೋಲ್ ನೀಡಿದ್ದಾನೆ. ಇದರ ಓವರ್‌ಡೋಸ್‌ನಿಂದ ಕೃತಿಕಾ ಮೊದಲು ನಿದ್ರೆಗೆ ಜಾರಿದ್ದು, ನಂತರ ಕೋಮಾಗೆ ಹೋಗಿದ್ದರು. ತಕ್ಷಣ ವೈದ್ಯಕೀಯ ಸಹಾಯ ನೀಡದ ಕಾರಣ ಬೆಳಗಿನ ವೇಳೆಗೆ ಆಕೆ ಮೃತಪಟ್ಟಿದ್ದಾರೆ. ಘಟನೆ ನಡೆದ ರಾತ್ರಿ ಆರೋಪಿ ಅದೇ ಕೊಠಡಿಯಲ್ಲಿ ಕೃತಿಕಾಳ ಜೊತೆಗೇ ಇದ್ದನೆಂಬುದನ್ನೂ ಪೊಲೀಸರು ದೃಢೀಕರಿಸಿದ್ದಾರೆ.

ಇದೇ ವೇಳೆ, ಕೃತಿಕಾ ರೆಡ್ಡಿ ಇದ್ದ ರೂಮ್‌ನಿಂದ ದೊಡ್ಡ ಪ್ರಮಾಣದ ಔಷಧಿಗಳು ಪತ್ತೆಯಾಗಿವೆ. ಗ್ಯಾಸ್ಟ್ರಿಕ್ ಔಷಧಿಗಳು, ಗ್ಲೂಕೋಸ್ ಬಾಟಲ್‌ಗಳು ಸೇರಿದಂತೆ ಮಾರಾಟಕ್ಕೆ ಲಭ್ಯವಿಲ್ಲದ ಹಲವಾರು ಔಷಧಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

 ಕೃತಿಕಾ ತನ್ನ ಕೊಠಡಿಯನ್ನು ಕ್ಲಿನಿಕ್‌ ಮಾದರಿಯಲ್ಲಿ ರೂಪಾಂತರಗೊಳಿಸಿದ್ದರು. ಋತುಚಕ್ರದ ಸಮಯದಲ್ಲಿಯೂ ಡ್ರಿಪ್ ಹಾಕಿಕೊಳ್ಳಲು ಒತ್ತಾಯಿಸುತ್ತಿದ್ದಳೆಂದು ಮಹೇಂದ್ರ ಹೇಳಿಕೆ ನೀಡಿದ್ದಾನೆ. ಕೃತಿಕಾ ಕೈಯಲ್ಲಿ ಕ್ಯಾನುವಲ್‌ ಚುಚ್ಚಿದ ಗುರುತುಗಳು ಪತ್ತೆಯಾಗಿದ್ದು, ಅವು ವೈದ್ಯಕೀಯ ಬಳಕೆಯ ದೃಢತೆಯನ್ನು ನೀಡುತ್ತವೆ ಎಂದು ಮೂಲಗಳು ತಿಳಿಸಿವೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0