ಗುಡ್ಡೆಹೊಸೂರು ರಾಷ್ಟ್ರೀಯ ಹೆದ್ದಾರಿಯ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಅವರ 119ಜಯಂತಿ ಆಚರಣೆ

Apr 2, 2026 - 09:43
Apr 2, 2026 - 09:44
 0  204
ಗುಡ್ಡೆಹೊಸೂರು ರಾಷ್ಟ್ರೀಯ ಹೆದ್ದಾರಿಯ ಶಿವಕುಮಾರ  ಸ್ವಾಮೀಜಿ ವೃತ್ತದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಅವರ 119ಜಯಂತಿ   ಆಚರಣೆ

ಕುಶಾಲನಗರ : ಡಾ.ಶಿವಕುಮಾರ ಸ್ವಾಮೀಜಿ ಯವರ 119 ನೇ ಜಯಂತಿ ಕಾರ್ಯಕ್ರಮ ವನ್ನು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಡಾ.ಶಿವಕುಮಾರ ಸ್ವಾಮೀಜಿ ವೃತ್ತ ದಲ್ಲಿ ಗುಡ್ಡೆಹೊಸೂರು ಹಾಗೂ ಬಳ್ಳೂರು ವೀರಶೈವ ಸಮಾಜದ ವತಿಯಿಂದ ಆಚರಿಸಲಾಯಿತು.

 ವೃತ್ತವನ್ನು ತಳಿರು ತೋರಣಗಳು ಹಾಗು ಪುಷ್ಪಮಾಲೆಗಳೊಂದಿಗೆ ಅಲಂಕರಿಸಿ ಶ್ರೀಗಳ ಭಾವಚಿತ್ರ ವನ್ನು ಪೂಜಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ನೆರೆದ ಭಕ್ತರಿಗೆ ಸಿಹಿ ವಿತರಿಸಲಾಯಿತು.

ಈ ಸಂದರ್ಭ ಗುಡ್ಡೆಹೊಸೂರು ವೀರಶೈವ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ, ಕಾರ್ಯದರ್ಶಿ ದ್ರಾಕ್ಷಾಯಿಣಿ, ಸಿದ್ದಗಂಗಾ ಭಕ್ತ ಮಂಡಳಿ ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಮುಖರಾದ ಶುಭಶೇಖರ, ಉದ್ಯನಿ ಮೌರ್ಯ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸಾಗರ್, ಸಹಕಾರ ಸಂಘದ ಉಪಾಧ್ಯಕ್ಷ ಕಾಶಿ, ಹುಲುಸೆ ವೀರಶೈವ ಸಮಾಜದ ಅಧ್ಯಕ್ಷ ಶಿವನಂಜಪ್ಪ, ಕವಿತಾ, ವೈಶಾಲಿ, ಚಿದಾನಂದ, ಗಣೇಶ, ಚಿಮ್ಮಣ್ಣ, ಶಿಕ್ಷಕ ಪುಟ್ಟರಾಜು, ಸಂಪತ್, ಮೊದಲಾದವರು ಇದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0