ಕರವೇ ಸ್ವಾಭಿಮಾನಿ ಬಣದ ನೆಲ್ಲಿಹುದಿಕೇರಿ ಶಾಖೆಗೆ ಆಯ್ಕೆ ಹಾಗೂ ಸದಸ್ಯರ ಸೇರ್ಪಡೆ; ಏ.8 ರಂದು ಕುಶಾಲನಗರದಲ್ಲಿ ಪದಗ್ರಹಣ

ಕರವೇ ಸ್ವಾಭಿಮಾನಿ ಬಣದ ನೆಲ್ಲಿಹುದಿಕೇರಿ ಶಾಖೆಗೆ ಆಯ್ಕೆ ಹಾಗೂ ಸದಸ್ಯರ ಸೇರ್ಪಡೆ; ಏ.8 ರಂದು ಕುಶಾಲನಗರದಲ್ಲಿ  ಪದಗ್ರಹಣ

ಸಿದ್ದಾಪುರ:-ರಾಜ್ಯಾದ್ಯಂತ ಭ್ರಷ್ಟಾಚಾರ, ದೌರ್ಜನ್ಯದ ವಿರುದ್ದ ಸಮರ ಸಾರಿರುವ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನೆಲ್ಲಿಹುದಿಕೇರಿಯ ಶಾಖೆಗೆ ಪದಾಧಿಕಾರಿಗಳ ಆಯ್ಕೆಯು ವಿ. ಎಸ್. ಎಸ್. ಎನ್ ಸಭಾಂಗಣದಲ್ಲಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕುಮಾರ್ ನೆಲ್ಲಿಕಲ್ಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಕುಮಾರ್, ರಾಜ್ಯಾದ್ಯತ ಕನ್ನಡ ಶಾಲೆಗಳ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಉಳಿವಿಗೆ ನಮ್ಮ ಸಂಘಟನೆ ಪಣತೊಟ್ಟಿದ್ದು ಈ ನಿಟ್ಟಿನಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಶೈಕ್ಷಣಿಕ ಸೌಲಭ್ಯ ನೀಡಿ ಮೇಲೆತ್ತುವ ಕೆಲಸ ವಾಗಬೇಕಿದ್ದು, ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಘಟನೆ ಕೆಲಸ ನಿರ್ವಹಿಸುತ್ತಿದೆ ಎಂದ ಅವರು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಜಿಲ್ಲೆಯ ಬಹುತೇಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಹಾಗೂ ಔಷಧಿ ಕೊರತೆ ಇದ್ದು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮುಂದಿ ದಿನಗಳಲ್ಲಿ ಕರವೇ ಸ್ವಾಭಿಮಾನಿ ಬಣದ ನೇತೃತ್ವದಲ್ಲಿ ಹೋರಾಟ ರೂಪಿಸಲಾಗುವುದು.

 ಸರಕಾರದ ಸೌಲಭ್ಯ ಸಮರ್ಪಕವಾಗಿ ತಲುಪಿಸುವ ಕೆಲಸವಾಗಬೇಕಿದ್ದು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲಾ ಗ್ರಾಮಗಳಲ್ಲಿ ಸಂಘಟನೆಯನ್ನು ಬಲಪಡಿಸಬೇಕಿದ್ದು ಕೖ ಜೋಡಿಸ ಬೇಕು ಮನವಿ ಮಾಡಿದರು.

 ಇದೇ ಸಂದರ್ಭದಲ್ಲಿ ನೆಲ್ಲಿಹುದಿಕೇರಿ ಶಾಖೆಯ ನೂತನ ಅಧ್ಯಕ್ಷರಾಗಿ ಹರೀಶ್ ಪಿ. ಆರ್. ಉಪಾಧ್ಯಕ್ಷರಾಗಿ ರಶಾದ್ ಎ. ಎಂ.ಕಾರ್ಯದರ್ಶಿ ನಂದ ಆರ್ ಆಯ್ಕೆ ಮಾಡಲಾಗಿದ್ದು,ಏ8ರಂದು ಕುಶಾಲನಗರದಲ್ಲಿ ರಾಜ್ಯಾಧ್ಯಕ್ಷ ಪಿ. ಕೃಷ್ಣೇ ಗೌಡರವರ ನೇತೃತ್ವದಲ್ಲಿ ಜಿಲ್ಲಾ ಸಮಿತಿಯ ಪದಗ್ರಹಣ ನಡೆಯಲಿದೆ.

 ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಗೌರವ ಅಧ್ಯಕ್ಷ ಚಂದ್ರು, ಉಪಾಧ್ಯಕ್ಷ ರಾಜಶೇಖರ ಗೌಡ್ರು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಮುರುಗೇಶ್, ಗೌರವಾಧ್ಯಕ್ಷ ವಾಣಿ ಮಾಚಿಮಾಡ ಪದಾಧಿಕಾರಿಗಳಾದ ,ಚಂದ್ರಶೇಖರ್, ಜಯರಾಜ್,ಸತೀಶ್ ಕುಮಾರ್,ರವಿ,ಚೇತನ್, ಸುರೇಶ್ ಹಾಜರಿದ್ದರು.