ಕುಟುಂಬವೇ ದ್ರೋಹ ಬಗೆಯಿತು” ಎಂದ ಪ್ರಿಯಕರನ ಶವದ ಜತೆ ಮದುವೆಯಾದ ಯುವತಿ

Dec 2, 2025 - 23:31
 0  1.4k
ಕುಟುಂಬವೇ ದ್ರೋಹ ಬಗೆಯಿತು” ಎಂದ ಪ್ರಿಯಕರನ ಶವದ ಜತೆ ಮದುವೆಯಾದ ಯುವತಿ
Photo credit: TV09

ನಾಂಡೇದ್, ಡಿ. 02: ಜಾತಿ ಬೇರೆಯೆಂದು ಪ್ರೇಮಿಯನ್ನು ಹತ್ಯೆ ಮಾಡಿದ ಕುಟುಂಬದ ಕೃತ್ಯದ ವಿರುದ್ಧ, ಸಕ್ಷಮ್‌ ರ ಶವ ಜತೆಯೇ ಮದುವೆಯಾಗಿದ್ದ ಆಂಚಲ್ ಮೊದಲ ಬಾರಿಗೆ ಭಾವುಕರ ಪ್ರತಿಕ್ರಿಯೆ ನೀಡಿದ್ದಾರೆ. “ನನ್ನದೇ ಕುಟುಂಬ ನಮ್ಮಿಬ್ಬರ ಮೇಲೂ ದ್ರೋಹ ಮಾಡಿದೆ,” ಎಂದು ಆಕೆಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್‌ಸ್ಟಾಗ್ರಾಂ ಪರಿಚಯದಿಂದ ಬೆಳೆದ ಆಂಚಲ್–ಸಕ್ಷಮ್‌ ರ ಪ್ರೀತಿ ಮೂರು ವರ್ಷಗಳಿಂದ ಮುಂದುವರಿದಿತ್ತು. ಸಂಬಂಧದ ಬಗ್ಗೆ ಮನೆಯವರಿಗೆ ತಿಳಿದಿದ್ದರೂ, ಜಾತಿ ಬೇರೆ ಎನ್ನುವ ಕಾರಣಕ್ಕೆ ಮದುವೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂದು ತಿಳಿದು ಬಂದಿದೆ.

“ಸಕ್ಷಮ್‌ ಜೊತೆ ಮನೆಯವರು ಸ್ನೇಹಪೂರ್ವಕವಾಗಿ ವರ್ತಿಸುತ್ತಿದ್ದರು. ಒಟ್ಟಿಗೆ ಊಟ ಮಾಡುತ್ತಿದ್ದರು. ಎಲ್ಲವೂ ಸರಿಯೇ ಇದೆ ಎಂದು ನಮಗೆ ನಂಬಿಕೆ ಮೂಡಿಸಿದ್ದರು. ಆದರೆ ಹತ್ಯೆ ಮಾಡುವ ಯೋಚನೆ ಮಾಡಿಕೊಂಡಿದ್ದಾರೆ ಎಂಬ ಕಲ್ಪನೆಯೂ ನಮಗೆ ಬಂದಿರಲಿಲ್ಲ,” ಎಂದು ಆಂಚಲ್ ಕಣ್ಣೀರು ಹಾಕಿದ್ದಾರೆ.

ಗುರುವಾರ ಸಂಜೆ ನಡೆದ ಜಗಳದ ವೇಳೆ ಆಂಚಲ್‌ ರ ಕಿರಿಯ ಸಹೋದರ ಹಿಮೇಶ್ ಗುಂಡು ಹಾರಿಸಿದ್ದು, ಸಕ್ಷಮ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರ ತನಿಖೆ ತಿಳಿಸಿದೆ. ಹಿಮೇಶ್, ಸಹೋದರ ಸಾಹಿಲ್, ತಂದೆ ಗಜಾನನ್ ಮಾಮಿದ್ವರ್ ಸೇರಿ ಐವರನ್ನು ಈ ಸಂಬಂಧ ಬಂಧಿಸಲಾಗಿದೆ.

ಹತ್ಯೆಗೆ ಮುನ್ನ, ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಸಕ್ಷಮ್ ವಿರುದ್ಧ ಸುಳ್ಳು ದೂರು ದಾಖಲಿಸುವಂತೆ ಸಹೋದರ ಒತ್ತಾಯಿಸಿದ್ದನ್ನೂ ಆಂಚಲ್ ತಿಳಿಸಿದ್ದಾರೆ. 

ಸಕ್ಷಮ್ ಅಂತ್ಯಕ್ರಿಯೆಯ ಸಿದ್ಧತೆ ನಡೆಯುತ್ತಿದ್ದ ವೇಳೆ ಆಂಚಲ್ ಅವರ ಮನೆಗೆ ತೆರಳಿ ಶವದ ಜತೆ ಮದುವೆಯಾದರು. “ಅವನೇ ನನ್ನ ಗಂಡ. ಜಾತಿಯ ಹೆಸರಿನಲ್ಲಿ ಜೀವ ತೆಗೆದವರೊಂದಿಗೆ ಯಾವುದೇ ಸಂಬಂಧವಿಲ್ಲ,” ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0