ನಾಲ್ಕನೇ ಮಗುವಿದ್ದರೆ ಸರ್ಕಾರಿ ಉದ್ಯೋಗ ಕಳೆದುಕೊಳ್ಳುವ ಭೀತಿ; ಬಂಡೆ ಕಲ್ಲಿನ ಮಧ್ಯೆ ನವಜಾತ ಶಿಶು ಬಿಟ್ಟು ಹೋದ ಪೋಷಕರು!

Oct 2, 2025 - 14:36
 0  734
ನಾಲ್ಕನೇ ಮಗುವಿದ್ದರೆ ಸರ್ಕಾರಿ ಉದ್ಯೋಗ ಕಳೆದುಕೊಳ್ಳುವ ಭೀತಿ; ಬಂಡೆ ಕಲ್ಲಿನ ಮಧ್ಯೆ ನವಜಾತ ಶಿಶು ಬಿಟ್ಟು ಹೋದ ಪೋಷಕರು!
Photo credit: INDIA TODAY

ಚಿಂದ್ವಾರಾ (ಮ.ಪ್ರ): ನಡೆದ ಒಂದು ಮಹತ್ವದ ಚರ್ಚೆಗೆ ಕಾರಣವಾಗಿದೆ. ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ದಂಪತಿ, ನಾಲ್ಕನೇ ಮಗುವಿನ ಕಾರಣದಿಂದ ಉದ್ಯೋಗ ಕಳೆದುಕೊಳ್ಳುವ ಭಯದಿಂದ ತಮ್ಮ 3 ದಿನದ ನವಜಾತ ಶಿಶುವನ್ನು ಬಂಡೆಗಳ ಕೆಳಗೆ ಬಿಟ್ಟುಹೋದ ದಾರುಣ ಘಟನೆ ಚಿಂದ್ವಾರಾ ಜಿಲ್ಲೆಯ ನಂದನ್ವಾಡಿ ಗ್ರಾಮದ ಸಮೀಪದ ಕಾಡಿನಲ್ಲಿ ನಡೆದಿದೆ.

ಅದೃಷ್ಟವಶಾತ್, ಗ್ರಾಮಸ್ಥರ ಮಗುವನ್ನು ಕಂಡಿದ್ದರಿಂದ, ಮಗು ಜೀವಂತವಾಗಿಯೇ ಪತ್ತೆಯಾಗಿದೆ.

ಭಾನುವಾರ ರಾತ್ರಿ ದಾರಿಹೋಕರೊಬ್ಬರು ಬಂಡೆಗಳ ಕೆಳಗಿನಿಂದ ಶಿಶುವಿನ ಅಳುವ ಶಬ್ದ ಕೇಳಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿ, ಪ್ರಾಥಮಿಕ ಚಿಕಿತ್ಸೆಯ ನಂತರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು.

2009ರಿಂದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಬಬ್ಲು ದಾಂಡೋಲಿಯಾ ಮತ್ತು ರಾಜಕುಮಾರಿ ದಾಂಡೋಲಿಯಾ ಮಗುವಿನ ಪೋಷಕರು ಎಂದು ಪತ್ತೆಯಾಗಿದೆ. ಈಗಾಗಲೇ ಮೂವರು ಮಕ್ಕಳಿರುವ ಈ ದಂಪತಿ, ನಾಲ್ಕನೇ ಮಗುವಿನ ಕಾರಣದಿಂದ ಸರಕಾರಿ ಕೆಲಸದಿಂದ ಅಮಾನತು ಅಥವಾ ವಜಾಗೊಳ್ಳುವ ಭಯದಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಪೋಷಕರು ಒಪ್ಪಿಕೊಂಡಿದ್ದಾರೆ.

 “ತಂದೆ ತನ್ನ ಉದ್ಯೋಗ ಕಳೆದುಕೊಳ್ಳುವ ಭಯದಿಂದ ಮಗುವನ್ನು ಬಂಡೆಗಳ ಕೆಳಗೆ ಬಿಟ್ಟಿದ್ದಾಗಿ ಒಪ್ಪಿಕೊಂಡಿದ್ದಾನೆ. ಇಬ್ಬರೂ ಪೋಷಕರನ್ನು ಬಂಧಿಸಲಾಗಿದೆ,” ಎಂದು ಬಟ್ಕಾಖಾಪಾ ಠಾಣಾ ಉಸ್ತುವಾರಿ ಅನಿಲ್ ರಾಥೋಡ್ ತಿಳಿಸಿದ್ದಾರೆ.

 “ಶಿಶು ಪ್ರಸ್ತುತ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಪ್ರಕರಣ ದಾಖಲಾಗಿ, ಕಾನೂನು ಕ್ರಮ ಮುಂದುವರಿಯುತ್ತಿದೆ,” ಎಂದು ಅಮರವಾರ SDOP ಕಲ್ಯಾಣಿ ಬರ್ಕಡೆ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 1
Sad Sad 1
Wow Wow 0