ಗೋಣಿಕೊಪ್ಪ:ಸಂಸದ ಯದುವೀರ್ ಒಡೆಯರ್ ಅವರ 34ನೇ ವರ್ಷದ ಹುಟ್ಟುಹಬ್ಬ ಆಚರಣೆ
ಗೋಣಿಕೊಪ್ಪ :ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ೩೪ನೇ ವರ್ಷದ ಹುಟ್ಟುಹಬ್ಬವನ್ನು ಗೋಣಿಕಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗೋಣಿಕೊಪ್ಪ ನಗರ ಬಿಜೆಪಿ ವತಿಯಿಂದ ಆಚರಿಸಲಾಯಿತು. ಆಸ್ಪತ್ರೆಯ ಒಳರೋಗಿಗಳಿಗೆ ಬ್ರೆಡ್, ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಣೆಯನ್ನು ಅರ್ಥಪೂರ್ಣ ಗೊಳಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟೀರ ಕಿಲನ್ ಗಣಪತಿ ಮಾತನಾಡಿ, ಮೈಸೂರು ರಾಜಪರಂಪರೆಯ ವಂಶಸ್ಥರು ಜನಸೇವೆಯಲ್ಲಿ ತೊಡಗಿಸಿಕೊಂಡು ನಾಡಿಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಆ ನಿಲುವಿನಲ್ಲಿ ಇಂದು ಬಿಜೆಪಿಯ ಸಂಸದರ ನಡೆಯು ಕಂಡುಬAದಿದೆ. ಈ ಹಿನ್ನಲೆಯಲ್ಲಿ ಸಂಸದರ ಹುಟ್ಟುಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ರೋಗಿಗಳ ಸೇವೆ ಮಾಡುವ ಸಣ್ಣ ಅವಕಾಶವನ್ನು ಕಲ್ಪಿಸಿಕೊಂಡು ಹಣ್ಣು ಹಂಪಲುಗಳನ್ನು ರೋಗಿಗಳಿಗೆ ಬಿಜೆಪಿ ವಿತರಿಸಿದೆ ಎಂದು ಹೇಳಿದರು.
ಭಾರತೀಯ ಜನತಾ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್ ಮಾತನಾಡಿ, ಈ ನಾಡಿನ ಸೇವೆಯನ್ನು ಸಮರ್ಪಕವಾಗಿ ಸಲ್ಲಿಸುವ ನಿಟ್ಟಿನಲ್ಲಿ ಮೈಸೂರು ಅರಸರ ವಂಶಸ್ಥರಾಗಿರುವ ಸಂಸದರು ಜನಸೇವೆಯನ್ನು ಜೀವನದ ನಡೆಯಾಗಿ ಮುಂದುವರಿಸಿದ್ದಾರೆ.
ಈ ಹಿನ್ನೆಲೆಗಳಿಗೆ ಅವರ ಹುಟ್ಟುಹಬ್ಬವನ್ನು ಸಂಭ್ರಮಿಸುವ ನಿಟ್ಟಿನಲ್ಲಿ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮವನ್ನು ಬಿಜೆಪಿ ಆಯೋಜಿಸಿದೆ ಎಂದು ತಿಳಿಸಿದರು. ಗೋಣಿಕೊಪ್ಪ ನಗರ ಶಕ್ತಿ ಕೇಂದ್ರದ ಪ್ರಮುಖ ಮಂಜು ಸುರೇಶ್ ರೈ, ಸಹ ಸಂಚಾಲಕ ದೀಪಕ್, ಗ್ರಾಪಂ ಸದಸ್ಯರುಗಳಾದ ರಾಜೇಶ್, ಗೀತಾ, ಕಾರ್ಯಕರ್ತರುಗಳಾದ ಸುಬ್ರಮಣಿ, ಸುಭಾಷ್, ಆಸ್ಪತ್ರೆಯ ವೈದ್ಯ ಡಾ. ಸುರೇಶ್ ಇದ್ದರು.