ಫೆ.21ರಂದು ಮರಗೋಡುವಿನಲ್ಲಿ ಹಿಂದೂ ಸಂಗಮ ಕಾರ್ಯಕ್ರಮ
ಮಡಿಕೇರಿ: ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದಲ್ಲಿ ಫೆ೨೧ ರಂದು ಹಿಂದೂ ಸಂಗಮ ಆಯೋಜನಾ ಸಮಿತಿಯ ಮರಗೋಡು ಮಂಡಲ ವತಿಯಿಂದ ಹಿಂದೂ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿಯ ಮರಗೋಡು ಮಂಡಲ ಅಧ್ಯಕ್ಷ ಪಿ.ವೈ.ಆನಂದ ರಘು ತಿಳಿಸಿದ್ದಾರೆ.
ಅಂದು ಬೆಳಗ್ಗೆ ೯.೩೦ ಗಂಟೆಗೆ ಮರಗೋಡು ಪದವಿ ಪೂರ್ವ ಕಾಲೇಜು ಮೈದಾನದಿಂದ ಮೆರವಣಿಗೆ ನಡೆಯಲಿದೆ. ನಂತರ ಬೆಳಗ್ಗೆ ೧೧ ಗಂಟೆಗೆ ಭೌದ್ಧಿಕ್ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರಗೋಡಿನ ಚೆರಿಯಮನೆ ಉದಯ್‌ಕುಮಾರ್ ವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಮರಗೋಡು ಗ್ರಾಮದ ಸುತ್ತಮುತ್ತಲಿನ ಹಿಂದೂ ಸಮಾಜಬಾಂಧವರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿಯ ಮರಗೋಡು ಮಂಡಲ ಉಪಾಧ್ಯಕ್ಷ ಲಕ್ಷ್ಮಿಪತಿ, ಪ್ರಮುಖರಾದ ಸನತ್‌ಕುಮಾರ್, ಬೆಳ್ಯಪ್ಪ, ಚಿದಂಬರ ಇದ್ದರು.