IPL2026;ಚೈನೈ ಸೂಪರ್ ಕಿಂಗ್ಸ್ ‌ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭರ್ಜರಿ ಗೆಲುವು; ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್

Mar 30, 2026 - 23:02
 0  368
IPL2026;ಚೈನೈ ಸೂಪರ್ ಕಿಂಗ್ಸ್ ‌ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭರ್ಜರಿ ಗೆಲುವು;  ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್
ಜೈಸ್ವಾಲ್&ಸೂರ್ಯವಂಶಿ

ಗುವಾಹಟಿ, ಮಾ.31: ಆರಂಭಿಕ ಬ್ಯಾಟರ್ ವೈಭವ್‌ ಸೂರ್ಯವಂಶಿ ಅವರ ಸಿಡಿಲಬ್ಬರದ ಬ್ಯಾಟಿಂಗ್ (52 ರನ್, 17 ಎಸೆತ, 4 ಬೌಂಡರಿ, 5 ಸಿಕ್ಸರ್) ನೆರವಿನಿಂದ 2026ರ ಐಪಿಎಲ್ ಟಿ-20 ಟೂರ್ನಿಯ ಮೂರನೇ ಲೀಗ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 8 ವಿಕೆಟ್ ಗಳ ಅಂತರದಿಂದ ಸುಲಭವಾಗಿ ಮಣಿಸಿ ಶುಭಾರಂಭ ಮಾಡಿತು.

 ಸೋಮವಾರ ಟಾಸ್ ಜಯಿಸಿದ ರಾಜಸ್ಥಾನ ತಂಡದ ನಾಯಕ ರಿಯಾನ್ ಪರಾಗ್ ಮೊದಲು ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿದ ರಾಜಸ್ಥಾನ ಬೌಲರ್ ಗಳು ಶಿಸ್ತುಬದ್ಧ ದಾಳಿಯಿಂದ ಸಿಎಸ್‌ಕೆ ತಂಡವನ್ನು 19.4 ಓವರ್‌ಗಳಲ್ಲಿ ಕೇವಲ 127 ರನ್ ಗೆ ನಿಯಂತ್ರಿಸಿದರು.

ಗೆಲ್ಲಲು ಸುಲಭ ಗುರಿ ಪಡೆದ ರಾಜಸ್ಥಾನ ತಂಡವು 12.1 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 128 ರನ್ ಗಳಿಸಿತು. ಇನ್ನೂ 47 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು.

ರಾಜಸ್ಥಾನದ ಇನಿಂಗ್ಸ್ ಆರಂಭಿಸಿದ ವೈಭವ್ ಹಾಗೂ ಯಶಸ್ವಿ ಜೈಸ್ವಾಲ್ (ಔಟಾಗದೆ 38 ರನ್, 36 ಎಸೆತ) 6.2 ಓವರ್‌ಗಳಲ್ಲಿ 75 ರನ್ ಸೇರಿಸಿ ಭರ್ಜರಿ ಆರಂಭ ಒದಗಿಸಿದರು. ವೈಭವ್ ಕೇವಲ 15 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್‌ಗಳ ಸಹಾಯದಿಂದ ಅರ್ಧಶತಕ ಪೂರೈಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0