ಬಜೆಗುಂಡಿ ಖಿಳರಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಸೋಮವಾರಪೇಟೆ:ಬಜೆಗುಂಡಿ ಖಿಳರಿಯಾ ಜುಮಾ ಮಸೀದಿ ಮತ್ತು ಮದರಸದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನೆರವೇರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಮಾಅತ್ ಅಧ್ಯಕ್ಷರಾದ ಕೆ ಎ ಯಾಕುಬ್ ಭಾರತೀಯರಾದ ನಾವೆಲ್ಲರೂ ಒಗ್ಗಟ್ಟಾಗಿ ಭಾರತದ ದೇಶವನ್ನು ಮುನ್ನಡೆಸಬೇಕು. ಸರ್ವರೂ ಜಾತಿ ಮತ ಭೇದವಿಲ್ಲದೆ ಒಗ್ಗಟ್ಟಾಗಿದ್ದಾರೆ ಅದುವೇ ಸ್ವಾತಂತ್ರ್ಯದ ನೈಜ ಆಶಯವಾಗುತ್ತದೆಯೆಂದರು. ಜಮಾಅತ್ ಖತೀಬರಾದ ಉಬೈದ್ ಫೈಝಿ, ಪ್ರಾಧ್ಯಾಪಕ ಶಮೀರ್ ಫೈಝಿ, ಕಾರ್ಯದರ್ಶಿ ಸುಲೈಮಾನ್, ಸಹಕಾರ್ಯದರ್ಶಿ ನಿಯಾಝ್, ಮದರಸ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.