ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದಿಂದ ವೈದ್ಯರ ದಿನಾಚರಣೆ: ಗ್ರಾಮೀಣ ಪ್ರದೇಶಗಳಲ್ಲಿ ಕತ೯ವ್ಯಕ್ಕೆ ಯುವವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಿ; ಡಾ.ಮಂತರ್ ಗೌಡ
ಮಡಿಕೇರಿ ಆ.1- ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜನರ ಸೇವೆಗೆ ಯುವ ವೈದ್ಯರು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕು, ಇಂಥ ವೈದ್ಯರಿಗೆ ಸಕಾ೯ರದಿಂದ ಸೂಕ್ತ ಸೌಲಭ್ಯ ನೀಡಲಾಗುತ್ತದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಭರವಸೆ ನೀಡಿದ್ದಾರೆ.
ನಗರದಲ್ಲಿ ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ವತಿಯಿಂದ ಆಯೋಜಿತ ವೈದ್ಯರ ದಿನಾಚರಣೆ ಸಂದಭ೯ ಸಾಧಕ ವೈದ್ಯರನ್ನು ಸನ್ಮಾನಿಸಿ ಮಾತನಾಡಿದ ಡಾ.ಮಂಥರ್ ಗೌಡ, ಎಲ್ಲಾ ಸವಾಲುಗಳ ನಡುವೇ ವೈದ್ಯರು, ಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡುವ ಮಹತ್ತರ ಹೊಣೆ ಹೊಂದಿದ್ದಾರೆ. ಕೊಡಗು ಜಿಲ್ಲೆಯಲ್ಲಿ ತಾನು ಶಾಸಕನಾದ ಬಳಿಕ ಜಿಲ್ಲಾ ಸಕಾ೯ರಿ ಆಸ್ಪತ್ರೆ ಸೇರಿದಂತೆ ಕ್ಷೇತ್ರದ ಹಲವು ಪ್ರಮುಖ ಆಸ್ಪತ್ರೆಗಳಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯ ನೀಡಿದ್ದೇನೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಗ್ರಾಮ, ತಾಲೂಕು ಆಸ್ಪತ್ರೆಗಳಲ್ಲಿ ಕತ೯ವ್ಯಕ್ಕೆ ವೈದ್ಯರು ಮನಸ್ಸು ಮಾಡಬೇಕೆಂದು ಕರ ನೀಡಿದರು.
ಮಡಿಕೇರಿಯಲ್ಲಿರುವ ಜಿಲ್ಲಾ ಸಕಾ೯ರಿ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿ ಮಾಡುವ ಚಿಂತನೆಯಿಂದ ಸಾಕಷ್ಟು ಸೌಲಭ್ಯವನ್ನು ಸಕಾ೯ರದಿಂದ ನೀಡಲಾಗುತ್ತಿದೆ. ಶೀಘ್ರದಲ್ಲಿಯೇ ಸುಸಜ್ಜಿತ ಹೖದ್ಗೋಗ ಚಿಕಿತ್ಸಾ ಘಟಕವೂ ಇಲ್ಲಿ ಪ್ರಾರಂಭವಾಗಲಿದ್ದು ಇದರಿಂದ ಪರ ಊರುಗಳ ಆಸ್ಪತ್ರೆಗಳಿಗೆ ತೆರಳುತ್ತಿದ್ದ ಕೊಡಗಿನ ಜನತೆಯ ಸಮಸ್ಯೆ ಪರಿಹಾರವಾಗಲಿದೆ ಎಂದೂ ಡಾ.ಮಂಥರ್ ಗೌಡ ನುಡಿದರು.
ವೈದ್ಯರದ್ದು ಮಾನವೀಯ ಮೌಲ್ಯಗಳಿಗೆಗೆ ಸಂಬಂಧಿಸಿದ ವೖತ್ತಿಯಾಗಿದೆ ಎಂದು ಶ್ಲಾಘಿಸಿದ ಡಾ.ಮಂಥರ್, ತಾನು ಕೂಡ ವೈದ್ಯನಾಗಿಯೇ ಇದ್ದವನು. ಹೀಗಾಗಿ ವೈದ್ಯರ ಬೇಡಿಕೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ವೈದ್ಯಕೀಯ ಒಕ್ಕೂಟದ ಕೊಡಗು ಘಟಕದಲ್ಲಿ ವೈದ್ಯರ ಸಂಖ್ಯೆ ಕಡಮೆ ಇರಬಹುದು. ಆದರೆ, ಹಿರಿತನದ ಅನುಭವದಲ್ಲಿ ಕೊಡಗಿನ ವೈದ್ಯರ ಸೇವೆಗೆ ಮೌಲ್ಯ ಕಟ್ಟಲಾಗುವುದಿಲ್ಲ ಎಂದೂ ಶಾಸಕರು ಹಷ೯ ವ್ಯಕ್ತಪಡಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿನ ತನ್ನ ಅನುಭವಗಳನ್ನು ಡಾ.ಮಂಥರ್ ಈ ಸಂದಭ೯ ಸ್ಮ್ರರಿಸಿಕೊಂಡರು.
ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ಅಧ್ಯಕ್ಷ ಡಾ.ಶ್ಯಾಮ್ ಅಪ್ಪಣ್ಣ ಮಾತನಾಡಿ, ಶಾಸಕರೇ ವೈದ್ಯರಾಗಿರುವ ಹಿನ್ನಲೆಯಲ್ಲಿ ವೈದ್ಯರ ಸಮಸ್ಯೆ, ಸಂಕಷ್ಟ, ಸವಾಲುಗಳ ಬಗ್ಗೆ ಚೆನ್ನಾಗಿ ಅರಿವಾಗಿರುತ್ತದೆ. ಕೊಡಗಿನಲ್ಲಿ ಸಾಕಷ್ಟು ಸವಾಲುಗಳ ಮದ್ಯೆ ಕಾಯ೯ನಿವ೯ಹಿಸುತ್ತಿರುವ ತನ್ನದೇ ವೖತ್ತಿನಿರತರ ಬೇಡಿಕೆಗೆ ಶಾಸಕರು ಸ್ಪಂದಿಸುವಂತಾಗಲಿ ಎಂದರಲ್ಲದೇ, ಕೊಡಗು ಘಟಕಕ್ಕೆ ತನ್ನದೇ ಸ್ವಂತ ಕಛೇರಿ ನಿಮಾ೯ಣದ ನಿಟ್ಟಿನಲ್ಲಿ ಶಾಸಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ಪ್ರಧಾನ ಕಾಯ೯ದಶಿ೯ ಚೆರಿಯಮನೆ ಡಾ.ಪ್ರಶಾಂತ್ ಘಟಕಕ್ಕೆ ಹೊಸದ್ದಾಗಿ ಸದಸ್ಯರಾದವರ ಪರಿಚಯ ಮಾಡಿದರು. ಡಾ.ಸುಮುಖ್ ನಿರೂಪಿಸಿದ ಕಾಯ೯ಕ್ರಮದಲ್ಲಿ ಡಾ. ಸುಧಾಕರ್ ವಂದಿಸಿದರು. ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಉಪಾಧ್ಯಕ್ಷ ಡಾ.ಮೋಹನ್ ಅಪ್ಪಾಜಿ, ಡಾ.ಅಯ್ಯಪ್ಪ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ.ಲೋಕೇಶ್ ನಿವ೯ಹಿಸಿದರು. ಡಾ.ಮಂಥರ್ ಗೌಡ ಅವರಿಗೆ ಭಾರತೀಯ ವೈದ್ಯಕೀಯ ಒಕ್ಕೂಟದ ಕೊಡಗು ಘಟಕದ ಸದಸ್ಯತ್ನ ನೀಡಿ ಗೌರವಿಸಲಾಯಿತು.
ಸಾಧಕ ವೈದ್ಯರಿಗೆ ಸನ್ಮಾನ
ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ವತಿಯಿಂದ ಸಾಧಕ ವೈದ್ಯರನ್ನು ಸನ್ಮಾನಿಸಲಾಯಿತು. ಹಿರಿಯ ವೈದ್ಯ ಡಾ.ರಮೇಶ್ ಬೋಪಯ್ಯ, ಡಾ. ಎಂ.ಎ. ದೇವಯ್ಯ, ಡಾ.ಪುರುಷೋತ್ತಮ್, ಡಾ ಕುಶ್ವಂತ್ ಕೋಳಿಬೈಲು, ಡಾ, ರೇಣುಕಾ ಅವರನ್ನು ಶಾಸಕ ಡಾ.ಮಂಥರ್ ಗೌಡ ಸನ್ಮಾನಿಸಿದರು.
ಈ ಸಂದಭ೯ ಮಾತನಾಡಿದ ಡಾ.ಕುಶ್ಲಂತ್, ರಾಜ್ಯ ಸಕಾ೯ರದಲ್ಲಿ ದಿನೇಶ್ ಗುಂಡೂರಾವ್ ಆರೋಗ್ಯ ಸಚಿವರಾಗಿದ್ದಾಗ ವೈದ್ಯಕೀಯ ನೀತಿಗೆ ತಿದ್ದುಪಡಿ ತಂದು ಖಾಸಗಿ ವೈದ್ಯರಿಗೆ ಚಿಕಿತ್ಸಾಲಯ ತೆರೆಯಲು ವಿಳಂಭರಹಿತವಾಗಿ ಅನುಮತಿ ನೀಡಲು ಮುಂದಾಗಿದ್ದು ರಾಜ್ಯವ್ಯಾಪಿ ಖಾಸಗಿ ವೈದ್ಯರಿಗೆ ಸಹಾಯವಾಯಿತು ಎಂದರು.
ಸನ್ಮಾನ ಸ್ವೀಕರಿಸಿದ ಡಾ. ಪುರುಷೋತ್ತಮ್ ಮಾತನಾಡಿ, ಜಿಲ್ಲಾ ಸಕಾ೯ರಿ ಆಸ್ಪತ್ರೆಗೆ 20 ಕೋಟಿ ರು. ಮೌಲ್ಯದ ವೈದ್ಯಕೀಯ ಉಪಕರಣಗಳು ಲಭಿಸಿದ್ದು ವೈದ್ಯರಿಗೆ ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
