ಕಾವೇರಿ ತವರಲ್ಲಿ ಜಾನಕಮ್ಮ ನೆನಪು
ಮಡಿಕೇರಿ ಜು. 12 - ಗಾನ ಕೋಗಿಲೆ ಎಸ್ . ಜಾನಕಿಯವರು ಕೊಡಗಿನಲ್ಲಿಯೂ ಕೆಲವು ದಿನಗಳನ್ನು ಕಳೆದಿದ್ದರು. ಕಾವೇರಿ ನದಿಯ ಉಗಮತಾಣ ತಲಕಾವೇರಿಗೆ ತೆರಳಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಲು ಜಾನಕಿ ಅವರು ಕೊಡಗಿಗೆ ಬಂದಿದ್ದರು.
ಮಡಿಕೇರಿಯಲ್ಲಿ ರಾಷ್ಟ್ರೀಯ ಔಷಧಿ ವ್ಯಾಪಾರಸ್ಥರ ಸಂಘದ ಸಂಘಟನಾ ಕಾಯ೯ದಶಿ೯ ಎ.ಕೆ. ಜೀವನ್ ಅವರ ತೋಟದ ಮನೆಯಲ್ಲಿ 2015 ರ ಏಪ್ರಿಲ್ ನಲ್ಲಿ 8 ದಿನಗಳನ್ನು ಕಳೆದಿದ್ದ ಎಸ್.ಜಾನಕಿ ಅವರು ಇಲ್ಲಿದ್ದಷ್ಟು ದಿನ ವಿವಿಧ ಹಾಡುಗಳನ್ನು ಹೇಳುತ್ತಿದ್ದರಂತೆ.
ಕೊಡಗಿನ ಸುಂದರ ನಿಸಗ೯ದ ಮಡಿಲಲ್ಲಿ ಆ ಸರಸ್ವತಿಯ ಗಾನಾರಾಧನೆಯಲ್ಲಿ ತೊಡಗಿರುವುದು ನನ್ನ ಭಾಗ್ಯ ಎಂಬ ಅವರ ಹೇಳಿಕೆಯನ್ನು ಎಂದು ಜೀವನ್ ಸ್ಮರಿಸಿಕೊಂಡರು. ಕನ್ನಡ ನಾಡಿನ ಜೀವನದಿ.. ಕಾವೇರಿ ಬಗ್ಗೆ ನಾನೇನೋ ಅನೇಕ ಹಾಡು ಹೇಳಿದ್ದೆೇನೆ.
ಅವೆಲ್ಲವೂ ಬಹಳ ಜನಪ್ರಿಯವೂ ಆಯಿತು. ಆದರೆ, ಇಂಥ ಮಹಾಮಾತೆಯ ಬಗೆಗಿನ ಹಾಡು ಹೇಳಿದ ಮೇಲೆ ಆ ಮಹಾಮಾತೆ ಕಾವೇರಿ ಸನ್ನಿಧಿಯನ್ನು ದಶ೯ನ ಮಾಡದಿದ್ದರೆ ಹೇಗೆ ಎಂದು ತಲಕಾರೇರಿಗೆ ಭೇಟಿ ನೀಡಲು ಬಂದಿದ್ದೇನೆ ಎಂದೂ ಜಾನಕಿ ವಿನಮ್ರತೆಯಿಂದ ಹೇಳಿದ್ದರು ಎಂದೂ ಜೀವನ್ ತಿಳಿಸಿದರು.
ಜಾನಕಿಯಮ್ಮ ಬಹಳ ಸರಳ ಜೀವಿ. ಅಷ್ಟೊಂದು ಖ್ಯಾತ ಗಾಯಕಿಯಾಗಿದ್ದರೂ ಒಂದಿಷ್ಟು ಅಹಂ ತೋರದೇ ಮನೆಯಲ್ಲಿ ನೆಲಸಿದ್ದರು. ಬೆಳಗ್ಗೆ ಇಡ್ಲಿ, ಮಧ್ಯಾಹ್ನ ಅನ್ನ ಸಾರು ರಾತ್ರಿಗೆ ಫಲಹಾರ ಕೊಟ್ಟರೆ ಸಾಕು. ನನಗಾಗಿ ಬೇರೆನೂ ಮಾಡಬೇಡಿ ಎಂದು ಹೇಳಿದ್ದರು. ಅವರು ಮನೆಯಲ್ಲಿದ್ದಷ್ಟು ದಿನ ಹಾಡಿನ ಲೋಕದಲ್ಲಿ ವಿಹರಿಸಿದ ಅನುಭವವಾಗಿತ್ತು. ಮಗಳು ಚಹನಾಳಿಗೂ ಕೆಲವು ಹಾಡುಗಳನ್ನು ಹೇಳಿಕೊಟ್ಟಿದ್ದರು. ಇಂಥ ಮೇರು ಗಾಯಕಿಯೊಂದಿಗೆ 1 ವಾರ ಕಳೆದದ್ದು ಜೀವನದ ಅತ್ಯಂತ ದೊಡ್ಡ ಭಾಗ್ಯ ಎಂದು ಸುಮಾಜೀವನ್ ಹೇಳಿದರು.
What's Your Reaction?
Like
1
Dislike
0
Love
0
Funny
0
Angry
0
Sad
2
Wow
0

