Kodagu

KSRTC ಮಡಿಕೇರಿ ಘಟಕದ ಚಾಲಕ ಶೇಖರ್ ಅವರಿಗೆ ಅತ್ಯುತ್ತಮ ಚಾಲಕ ಪ್ರಶಸ್ತಿ

admincoorgdaily

KSRTC ಮಡಿಕೇರಿ ಘಟಕದ ಚಾಲಕ ಶೇಖರ್ ಅವರಿಗೆ ಅತ್ಯುತ್ತಮ ಚಾಲಕ ಪ್ರಶಸ್ತಿ

ಮಡಿಕೇರಿ; ಕೆ.ಎಸ್.ಆರ್.ಟಿ.ಸಿ ಮಡಿಕೇರಿ ಘಟಕದ ಚಾಲಕ ಶೇಖರ್ ಅವರಿಗೆ ಅತ್ಯುತ್ತಮ ಚಾಲಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಂದ ‘ಬೆಳ್ಳಿಪದಕ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

 ಕೆ.ಎಸ್.ಆರ್.ಟಿ.ಸಿ ಮಡಿಕೇರಿ ಘಟಕದ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ¸ ಕೊಡಗಿನ ಪಾಲಿಬೆಟ್ಟದ ನಿವಾಸಿಯಾಗಿರುವ ಶೇಖರ್ ಅವರು, ಅಪಘಾತ ರಹಿತ ಅತ್ಯುತ್ತಮ ಚಾಲನೆ, ಉತ್ತಮ ಕರ್ತವ್ಯ ನಿಷ್ಠೆ, ಪ್ರಯಾಣಿಕರೊಂದಿಗೆ ಸೌಜನ್ಯದ ವರ್ತನೆ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ವಿನಯಯುತ ವರ್ತನೆ ಇವೆಲ್ಲ ಮಾನದಂಡಗಳ ಆಧಾರದಲ್ಲಿ ‘ಬೆಳ್ಳಿಪದಕ’ದ ಪ್ರಶಸ್ತಿಗೆ ಭಾಜನರಾಗಿದ್ದಾರೆ.