ನೂತನ ಎಸ್.ಪಿ ಬಿಂದುಮಣಿ ಅವರಿಗೆ ಸ್ವಾಗತ ಕೋರಿದ‌ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ

Jan 1, 2026 - 18:37
 0  1.4k
ನೂತನ ಎಸ್.ಪಿ  ಬಿಂದುಮಣಿ ಅವರಿಗೆ  ಸ್ವಾಗತ ಕೋರಿದ‌ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ

ಮಡಿಕೇರಿ:ನೂತನವಾಗಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಯೋಜನೆಗೊಂಡ ಬಿಂದುಮಣಿ ಅವರನ್ನು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸ್ವಾಗತಿಸಿಕೊಳ್ಳಲಾಯಿತು.

ನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಹೂಗುಚ್ಛ ನೀಡಿ ಅಧಿಕಾರಿಯನ್ನು ಸ್ವಾಗತಿಸಿಕೊಂಡು ಶುಭ ಕೋರಲಾಯಿತು.

ಈ ಸಂದರ್ಭ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್, ರಾಜ್ಯ ಸಮಿತಿ ನಿರ್ದೇಶಕಿ ಬಿ.ಆರ್. ಸವಿತಾ ರೈ, ಜಿಲ್ಲಾ ಸಮಿತಿ ನಿರ್ದೇಶಕರುಗಳಾದ ಆನಂದ್ ಕೊಡಗು, ಜೈರುಸ್ ಥೋಮಸ್ ಅಲೆಗ್ಸಾಂಡರ್, ಸಂತೋಷ್ ರೈ, ರಂಗಸ್ವಾಮಿ, ಚಿತನ್ ಕುಮಾರ್, ಅಬ್ದುಲ್ಲಾ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಉಪಾಧ್ಯಕ್ಷ ಮಂಜು ಸುವರ್ಣ ಹಾಜರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 1
Angry Angry 0
Sad Sad 1
Wow Wow 0