ತೆಲುಗು ಸಂಪ್ರದಾಯದಂತೆ ಮದುವೆಯಾದ ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ

Feb 26, 2026 - 14:39
Feb 26, 2026 - 19:11
 0  2.9k
ತೆಲುಗು ಸಂಪ್ರದಾಯದಂತೆ ಮದುವೆಯಾದ ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ

ರಾಜಸ್ಥಾನ; ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹ ಅದ್ಧೂರಿಯಾಗಿ ನೆರವೇರಿದೆ. ರಾಜಸ್ಥಾನದ ಉದಯಪುರದ ಐಶಾರಾಮಿ ರೆಸಾರ್ಟ್​​ನಲ್ಲಿ ಈ ಜೋಡಿ ಇಂದು (ಫೆಬ್ರವರಿ 26) ಬೆಳಿಗ್ಗೆ ಶುಭ ಮುಹೂರ್ತದಲ್ಲಿ ತೆಲುಗು ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಎರಡೂ ಕುಟುಂಬದ ಸದಸ್ಯರು, ಹಿರಿಯರು ಮತ್ತು ಆಪ್ತೇಷ್ಟರ ಸಮ್ಮುಖದಲ್ಲಿ ವಿಜಯ್ ದೇವರಕೊಂಡ, ರಶ್ಮಿಕಾ ಅವರಿಗೆ ತಾಳಿ ಕಟ್ಟುವ ಮೂಲಕ ಇಬ್ಬರೂ ಸತಿ-ಪತಿಗಳಾಗಿದ್ದಾರೆ.

 ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರುಗಳು ಕಳೆದ ಕೆಲ ವರ್ಷಗಳಿಂದಳೂ ಪರಸ್ಪರ ಪ್ರೀತಿಸುತ್ತಿದ್ದಿದ್ದು ಗುಟ್ಟೇನೂ ಆಗಿರಲಿಲ್ಲ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಇದೀಗ ತಮ್ಮ ಪ್ರೀತಿಯನ್ನು ದಾಂಪತ್ಯವನ್ನಾಗಿ ಬದಲಾಯಿಸಿಕೊಂಡಿದ್ದಾರೆ.

 ಉದಯಪುರದಲ್ಲಿ ಕಳೆದ ಕೆಲ ದಿನಗಳಿಂದಲೂ ಮದುವೆ ಕಾರ್ಯಗಳು ನಡೆಯುತ್ತಲೇ ಇದ್ದವು. ನಿನ್ನೆ ಹಳದಿ ಮತ್ತು ಸಂಗೀತ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಎರಡು ದಿನಗಳ ಹಿಂದೆ ತೆಲಂಗಾಣದಿಂದ ಪುರೋಹಿತರ ತಂಡವೊಂದು ಇವರ ಮದುವೆ ಕಾರ್ಯಕ್ರಮಕ್ಕೆಂದು ಉದಯಪುರಕ್ಕೆ ಬಂದಿತ್ತು.

 ಪುರೋಹಿತರುಗಳು ತೆಲುಗು ಸಂಪ್ರದಾಯದಂತೆ ಈ ಜೋಡಿಯ ಮದುವೆ ಮಾಡಿಸಿದ್ದಾರೆ. ಇದೇ ದಿನ ಸಂಜೆ ವೇಳೆಗೆ ಕೊಡವ ಸಂಪ್ರದಾಯದಂತೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಮತ್ತೊಮ್ಮೆ ನಡೆಯಲಿದೆ. ಇಬ್ಬರೂ ಸಹ ಭಿನ್ನ ಭಿನ್ನ ಸಂಪ್ರದಾಯಕ್ಕೆ ಸೇರಿದ ಕುಟುಂಬದವರಾಗಿರುವ ಕಾರಣ ಎರಡೂ ಕುಟುಂಬಗಳ ಸಂಪ್ರದಾಯ, ಆಚರಣೆಗೆ ಚ್ಯುತಿ ಬಾರದಂತೆ ಎರಡು ಭಿನ್ನ ರೀತಿಯಲ್ಲಿ ಈ ಜೋಡಿಯ ವಿವಾಹ ನಡೆಯುತ್ತಿದೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಈಗ ಅಧಿಕೃತವಾಗಿ ಸತಿ-ಪತಿಗಳಾಗಿದ್ದಾರೆ.

ಇಬ್ಬರೂ ಮದುವೆ ನಡೆದಿದೆಯಾದರೂ ಮದುವೆಯ ಅಧಿಕೃತ ಫೋಟೊವನ್ನು ಇನ್ನೂ ಈ ಜೋಡಿ ಹಂಚಿಕೊಂಡಿಲ್ಲ. ರಶ್ಮಿಕಾ ಮತ್ತು ವಿಜಯ್ ಅವರು ಮದುವೆಗೆ ಕೇವಲ ಆಪ್ತೇಷ್ಟರಿಗಷ್ಟೆ ಆಹ್ವಾನ ನೀಡಿದ್ದು, ಮಾರ್ಚ್ 04 ರಂದು ಬಲು ಅದ್ಧೂರಿಯಾಗಿ ಆರತಕ್ಷತೆ ಹಮ್ಮಿಕೊಂಡಿದ್ದು, ಹೈದರಾಬಾದ್​​ನ ತಾಜ್ ಕೃಷ್ಣನಲ್ಲಿ ವಿವಾಹ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ಎಲ್ಲ ಚಿತ್ರರಂಗದ ಗಣ್ಯರು, ಆಂಧ್ರ, ತೆಲಂಗಾಣ ರಾಜ್ಯಗಳ ರಾಜಕೀಯ ಮುಖಂಡರುಗಳು ಹಾಗೂ ಕೆಲವು ಕೇಂದ್ರ ಸಚಿವರು, ಸಂಸದರು ಸಹ ಭಾಗಿ ಆಗಲಿದ್ದಾರೆ.

What's Your Reaction?

Like Like 2
Dislike Dislike 0
Love Love 2
Funny Funny 0
Angry Angry 2
Sad Sad 2
Wow Wow 0