ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಕೃಷಿ ರತ್ನ ಪ್ರಶಸ್ತಿ

Feb 7, 2026 - 19:46
 0  152
ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಕೃಷಿ ರತ್ನ ಪ್ರಶಸ್ತಿ

ಕುಶಾಲನಗರ: ಕೃಷಿ ಆವಿಷ್ಕಾರಗಳಿಗೆ ನೀಡಿದ ಕೊಡುಗೆಗಳನ್ನು ಗುರುತಿಸಿ, ನವದೆಹಲಿಯ ಇಂಡಿಯನ್ ಇಂಡಿಜೆನಸ್ ಸೊಸೈಟಿ ಫಾರ್ ಸೈನ್ಸಸ್ ಮತ್ತು ಸೋಶಿಯಲ್ ಸೈನ್ಸಸ್‌ನಿಂದ "ಕೃಷಿ ರತ್ನ ಪ್ರಶಸ್ತಿ-2026"ಯನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರ ಅವರು ಸ್ವೀಕರಿಸಿದರು.

 ಇಂಡಿಯನ್ ಇಂಡಿಜಿನಸ್ ಸೊಸೈಟಿ ಫಾರ್ ಸೈನ್ಸಸ್ ಅಂಡ್ ಸೋಶಿಯಲ್ ಸೈನ್ಸಸ್, SS ಜಸ್ವಾಲ್ ಕಾಲೇಜ್ ನಾಗ್ಪುರದ ಅಡಿಯಲ್ಲಿ, ವಿಶ್ವವಿದ್ಯಾಲಯ ನಾಗ್ಪುರದಿಂದ ಆಯೋಜಿಸಲಾಗಿದ್ದ "ಫ್ರಾಂಟಿಯರ್ಸ್ ಎಕ್ಸ್‌ಪ್ಲೋರಿಂಗ್: ಇಂಟರ್‌ಡಿಸಿಪ್ಲಿನರಿ ಅಡ್ವಾನ್ಸ್‌ ಇನ್‌ ಬಯೋಲಾಜಿಕಲ್‌ ಮತ್ತು ಮೆಟೀರಿಯಲ್‌ ಸೈನ್ಸಸ್‌" ಅಂತರಾಷ್ಟ್ರೀಯ ಸಮ್ಮೇಳನದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

 ಇಂಡಿಯನ್ ಇಂಡಿಜೆನಸ್ ಸೊಸೈಟಿ ಫಾರ್ ಸೈನ್ಸಸ್ ಅಂಡ್ ಸೋಶಿಯಲ್ ಸೈನ್ಸಸ್‌‌ನ ಅಧ್ಯಕ್ಷರಾದ ಡಾ. ದಯಾನಂದ ಗೋಗಲೆ ಮತ್ತು ಪದಾಧಿಕಾರಿಗಳು, ಉಜಬಿಕಿಸ್ತಾನದ ಇನ್‌ಸ್ಟಿಟ್ಯೂಟ್ ಆಫ್ ಜೆನಿಟಿಕ್ಸ್ ಅಂಡ್ ಪ್ಲಾಂಟ್ ಎಕ್ಸ್‌‌ಪಿರಿಮೆಂಟಲ್ ಬಯಾಲಾಜಿಯ ಮುಖ್ಯಸ್ಥೆ ಡಾ‌.ಡಿಲ್ಫುಜ಼ಾ ಜಬ್ಬಾರ್ವ, ಎಸ್‌ಬಿಎಸ್‌ಎಸ್ ನ ಅಧ್ಯಕ್ಷರಾದ ಪ್ರೊ. ಪ್ರಮೋದ್ ರಾಮ್ ಟೆಕೆ, ಇತರೆ ವಿಜ್ಞಾನಿಗಳು ಮತ್ತು ಅತಿಥಿ ಗಣ್ಯರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0