GB ಸಿಂಡ್ರೋಮ್ ಎಂಬ ಭೀಕರವಾದ ಅಪರೂಪದ ಕಾಯಿಲೆಗೆ ತುತ್ತಾಗಿದ್ದ ಬಡ ಕುಟುಂಬಕ್ಕೆ ನೆರವಾದ ಶಾಸಕ ಎಎಸ್ ಪೊನ್ನಣ್ಣ ಹಾಗೂ ಚೋಕಂಡ ಸಂಜು ಸುಬ್ಬಯ್ಯ
ವಿರಾಜಪೇಟೆ;GB ಸಿಂಡ್ರೋಮ್ ಎಂಬ ಭೀಕರವಾದ ಅಪರೂಪದ ಕಾಯಿಲೆಗೆ ತುತ್ತಾಗಿದ್ದ ಒಂದು ಬಡ ಜೀವವನ್ನು ಉಳಿಸಿದ ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು ಹಾಗೂ ಅವರೊಂದಿಗೆ ಬೆರೆತು, ಬಡ ಜನರ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಚೋಕಂಡ ಸಂಜು ಸುಬ್ಬಯ್ಯ ರವರು ಮಾನವೀಯತೆ ಮೆರೆದಿದ್ದಾರೆ.
ಶ್ರೀಜೇಶ್, ಆಟೋ ಚಾಲಕ. ಪಾಲಿಬೆಟ್ಟ ನಿವಾಸಿ, ಇತ್ತೀಚೆಗೆ, ನನ್ನ ಭಾವನಾದ ಟಿ. ಶೆಟ್ಟಿಗೇರಿ ನಿವಾಸಿ, 24 ವರ್ಷದ ಅಭಯ್ ಅವರಿಗೆ ಅಚಾನಕ್ ಎರಡೂ ಕಾಲುಗಳು ನಿಷ್ಕ್ರಿಯಗೊಂಡು, ಕಾಲನ್ನು ಎತ್ತಲಾಗದೆ, ತೀವ್ರವಾದ ನೋವಿನಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಅವರನ್ನು ತಕ್ಷಣ ಮಂಗಳೂರಿನ ಪ್ರತಿಷ್ಠಿತ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಯಿತು. ಎಲ್ಲಾ ವಿಧದ ತಪಾಸಣೆಗಳ ಬಳಿಕ, ಅವರಿಗೆ ನರ ಸಂಬಂಧಿತ ಅಪರೂಪದ ಜೀವಕ್ಕೆ ಅಪಾಯ ಇರುವಂತಹ 'GB Syndrome (Guillain-Barré Syndrome)' ಎನ್ನುವಂಥ ಕಾಯಿಲೆ ದೃಢಪಟ್ಟಿತು. ಈ ಕಾಯಿಲೆಯ ಚಿಕಿತ್ಸೆಗೆ 15 ರಿಂದ 20 ಲಕ್ಷ ರೂ.ವರೆಗೆ ವೆಚ್ಚವಾಗುತ್ತದೆ ಎಂದು ತಿಳಿದುಬಂದಾಗ,
ಆಟೋ ಚಾಲಕರಾಗಿ ಜೀವನ ನಡೆಸುತ್ತಿರುವ ಬಡ ಕುಟುಂಬಕ್ಕೆ ಈ ಮೊತ್ತವನ್ನು ಭರಿಸುವುದು ಅಸಾಧ್ಯವಾಗಿತ್ತು. ಈ ಸಂಕಷ್ಟದ ಸಮಯದಲ್ಲಿ, ಪಾಲಿಬೆಟ್ಟದ ನಿವಾಸಿ ಹಾಗೂ ನನ್ನ ಸ್ನೇಹಿತರಾದ ಕಾಂಗ್ರೆಸ್ ಪಕ್ಷದ ನಾಯಕರಾದ ರವೀಂದ್ರ ಬಾವೆ ಅವರ ಮೂಲಕ ಈ ವಿಷಯವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರ ಗಮನಕ್ಕೆ ತರಲಾಯಿತು.
ನಮ್ಮ ಕರೆಗೆ ಓಗೊಟ್ಟು, ಮಾನ್ಯ ಶಾಸಕರು ಪಕ್ಷದ ಕಾರ್ಯನಿಮಿತ್ತ ದೆಹಲಿಯಲ್ಲಿ ಪಕ್ಷದ ಸಭೆಯಲ್ಲಿದ್ದರೂ ಕೂಡ ದೂರವಾಣಿ ಮೂಲಕ ತಕ್ಷಣ ಸ್ಪಂದಿಸಿ, ಅವರೊಂದಿಗೆ ಸಹಕರಿಸಿ ಬಡ ರೋಗಿಗಳಿಗೆ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ, ಅಮ್ಮತ್ತಿಯ ಸಮಾಜಸೇವಕರಾದ ಚೋಕಂಡ ಸಂಜು ಸುಬ್ಬಯ್ಯ ಅವರೊಂದಿಗೆ ಸಂಪರ್ಕ ಸಾಧಿಸಿ, ರೋಗಿಗೆ ಸಂಪೂರ್ಣ ನೆರವು ಒದಗಿಸಿಕೊಡುವಂತೆ ವಿನಂತಿಸಿಕೊಂಡರು.
ಸಂಜು ಸುಬ್ಬಯ್ಯ ಅವರು ಕೂಡ ತಕ್ಷಣ ಸ್ಪಂದಿಸಿ, ರೋಗಿಯು ಬಿಪಿಎಲ್ ಕಾರ್ಡ್ ಹೊಂದಿರುವುದನ್ನು ಪರಿಗಣಿಸಿ, ಶಾಸಕರ ಸಹಕಾರದಿಂದ ಬೆಂಗಳೂರಿನ ವಿಕ್ಟೋರಿಯಾ PMSSY ಆಸ್ಪತ್ರೆಯ ನಿರ್ದೇಶಕರಾದ ಡಾ. ದಿವ್ಯ ಪ್ರಕಾಶ್ ಹಾಗೂ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಸುಮಾರು 20 ಲಕ್ಷ ರೂ. ವೆಚ್ಚದ ಚಿಕಿತ್ಸೆಯನ್ನು ಉಚಿತವಾಗಿ ದೊರಕಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದರು.
ಸಂಜು ಸುಬ್ಬಯ್ಯರವರು, ಚಿಕಿತ್ಸೆಯ ಆರಂಭದಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬರುವ ತನಕ ನಿರಂತರವಾಗಿ ಶ್ರಮಿಸಿ ಸಹಕಾರ ನೀಡಿದ್ದಾರೆ. ನಮ್ಮಿಂದ ಏನು ಮಾಡಲಾಗದೆ ದಿಕ್ಕು ತೋಚದ ಸಮಯದಲ್ಲಿ ಆಪತ್ಬಾಂದವರಾಗಿ ನಮ್ಮ ಬೆನ್ನೆಲುಬಾಗಿ ನಿಂತು ಹೆಜ್ಜೆ ಹೆಜ್ಜೆಗೂ ಸಹಕಾರ ಹಾಗೂ ಸಹಾಯ ನೀಡಿ ಶಾಸಕರಾದ ಎ.ಎಸ್. ಪೊನ್ನಣ್ಣನವರು, ಸಮಾಜ ಸೇವಕರಾದ ಶ್ರೀ ಸಂಜು ಸುಬ್ಬಯ್ಯರವರು ಹಾಗೂ ಪಕ್ಷದ ನಾಯಕರಾದ ರವೀಂದ್ರ ಬಾವೆರವರು ಮಾನವೀಯತೆ ಮೆರೆದಿರುತ್ತಾರೆ.
ಈ ಮಾನವೀಯ ನೆರವಿನ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ, ನನ್ನ ಹಾಗೂ ನನ್ನ ಭಾವ ವೈಭವ್ ಅವರ ಕುಟುಂಬದ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು ಮತ್ತು ಅನಂತ ಕೋಟಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ