Kodagu

ಬಲ್ಯಮುಂಡೂರು ವ್ಯಾಪ್ತಿಯಲ್ಲಿ ನೂತನ ರಸ್ತೆ ಕಾಮಗಾರಿಗೆ ಶಾಸಕ ಎಎಸ್ ಪೊನ್ನಣ್ಣ ಚಾಲನೆ

admincoorgdaily

ಬಲ್ಯಮುಂಡೂರು ವ್ಯಾಪ್ತಿಯಲ್ಲಿ ನೂತನ ರಸ್ತೆ ಕಾಮಗಾರಿಗೆ ಶಾಸಕ ಎಎಸ್ ಪೊನ್ನಣ್ಣ ಚಾಲನೆ

ಪೊನ್ನಂಪೇಟೆ:ತಾಲೂಕಿನ ಬಲ್ಯಮಂಡೂರು ಗ್ರಾಮಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು. ಪೊನ್ನಂಪೇಟೆ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಯುಕ್ತ ಪ್ರವಾಸ ಕೈಗೊಂಡಿರುವ ಶಾಸಕರು, ಬಲ್ಯಮುಂಡೂರು ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ರಸ್ತೆ ಕಾಮಗಾರಿ ಆರಂಭಿಸಲು ಭೂಮಿ ಪೂಜೆ ನೆರವೇರಿಸಿದರು.

 ಇಲ್ಲಿಯ ಪ್ರಸಿದ್ಧ ತಲೆಬಾಲೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ₹ 10ಲಕ್ಷ ಅನುದಾನವನ್ನು ಮಾನ್ಯ ಶಾಸಕರು ಒದಗಿಸಿದ್ದಾರೆ. ಬಳಿಕ ಮಾತನಾಡಿದ ಮಾನ್ಯ ಶಾಸಕರು, ಸಾರ್ವಜನಿಕರ ಬೇಡಿಕೆಗೆ ಅನುಸಾರವಾಗಿ ಈ ಭಾಗದ ರಸ್ತೆಯ ಅಭಿವೃದ್ಧಿಗೆ ಸರಕಾರದ ವತಿಯಿಂದ ಅನುದಾನವನ್ನು ಒದಗಿಸಿದ್ದು ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷರು ಮಿದೇರಿರ ನವೀನ್, ವಲಯ ಅಧ್ಯಕ್ಷರು ರಾಜ ಕಾರ್ಯಪ್ಪ, ಹಿರಿಯರು ಪೆಮ್ಮಂಡ ಪೊನ್ನಪ್ಪ, ದಯಾನಂಡ ಸುಗುಣ, ಕೊಟ್ಟಂಗಡ ಡಿಕ್ಕಿ, ಲಾಲಾ, ಮಧು, ಜೀವನ್, ಸಜಿ, ಶಾನು, ಅರುಣ್, ಕಿಸು, ಅಜ್ಜಿಕುಟ್ಟಿರ ಪೊನ್ನು, ಗಿರೀಶ್, ದಿಲ್ಲು, ಸುಕು ಬೋಪಣ್ಣ, ಸಾಜಿ ಅಚ್ಚುತನ್ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.