ಮಡಿಕೇರಿ; ಸಮಾಜ ಸೇವಕ ಬಾಬು ಚಂದ್ರ ಉಳ್ಳಾಗಡ್ಡಿ ಅವರ ಅಂತಿಮ‌ ದರ್ಶನ ಪಡೆದ ಶಾಸಕ ಎಎಸ್ ಪೊನ್ನಣ್ಣ

ಮಡಿಕೇರಿ; ಸಮಾಜ ಸೇವಕ ಬಾಬು ಚಂದ್ರ ಉಳ್ಳಾಗಡ್ಡಿ ಅವರ ಅಂತಿಮ‌ ದರ್ಶನ ಪಡೆದ ಶಾಸಕ ಎಎಸ್ ಪೊನ್ನಣ್ಣ

ಮಡಿಕೇರಿ :ಶನಿವಾರ ನಿಧನಾರಸ ಮಡಿಕೇರಿ ನಿವಾಸಿ ಬಾಬು ಚಂದ್ರ ಉಳ್ಳಾಗಡ್ಡಿ ರವರ ಅಂತಿಮ ದರ್ಶನವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಪಡೆದರು.

ಹಿರಿಯ ಏಲಕ್ಕಿ ವರ್ತಕರಾಗಿದ್ದ ಇವರು, ಚೇಂಬರ್ ಆಫ್ ಕಾಮರ್ಸ್ ನ ಹಿರಿಯ ನಿರ್ದೇಶಕರು ಆಗಿದ್ದರು. ಲಯನ್ಸ್ ಸಂಸ್ಥೆಯಲ್ಲಿ ಅನೇಕ ದಶಕಗಳು ಸದಸ್ಯರಾಗಿ ಸಾಮಾಜಿಕ ಸೇವಾ ಕಾರ್ಯ ಕೈಗೊಂಡಿದ್ದ ಇವರ ಸೇವೆಯನ್ನು ಶಾಸಕರು ಈ ಸಂದರ್ಭದಲ್ಲಿ ಸ್ಮರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಗ್ಯಾರಂಟಿ ಯೋಜನೆ ಸಮಿತಿಯ ಉಪಾಧ್ಯಕ್ಷರು ಮೆಹರೋಜ್ ಖಾನ್ ರವರು ಉಪಸ್ಥಿತರಿದ್ದರು.