ಮಡಿಕೇರಿ:ಮಂಜಿನ ನಗರಿಯಲ್ಲಿ ಕಳ್ಳನ ಕೈಚಳಕ
admincoorgdaily

ಮಡಿಕೇರಿ: ಮಡಿಕೇರಿ- ಸಿದ್ದಾಪುರ ರಸ್ತೆಯಲ್ಲಿ ಡಿಸಿ ಮನೆ ಬಳಿಯಲ್ಲಿಯೇ ಇರುವ ಮನೆಗೆ ನುಗ್ಗಿ ಯುವ ಚೋರನೊಬ್ಬ ಕಳ್ಳತನ ಮಾಡಿದ ಬಗ್ಗೆ ವರದಿಯಾಗಿದೆ. ಮೂರು ದಿನದ ಹಿಂದೆ ಮಾಜಿ ಕೌನ್ಸಿಲರ್ ಉನ್ನಿ ಕೃಷ್ಣ ಅವರ ಮನೆಗೆ ನುಗ್ಗಲು ಯತ್ನಿಸಿದ್ದ ಕಳ್ಳನಿಂದಲೇ ಇಂದು ಮತ್ತೆ ದುಷ್ಕೃತ್ಯ ಎಂದು ಹೇಳಲಾಗಿದೆ.
ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಸಿದ್ದಾಪುರ ರಸ್ತೆಯಲ್ಲಿನ ಪ್ರಶಾಂತ್ ಮನೆಗೆ ನುಗ್ಗಿ ಕಳ್ಳತನ ಮಾಡಿರೋ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ಮನೆಗೆ ಪ್ರಶಾಂತ್ ಮರಳಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಚೋರ ಮನೆಯೊಳಗೆ ನುಗ್ಗಿ ಮನೆ ಚೆಲ್ಲಾಪಿಲ್ಲಿ ಮಾಡಿ ಹೋಗಿರುವ ಬಗ್ಗೆ ಸಿ. ಸಿ. ಕ್ಯಾಮೆರಾದಲ್ಲಿ ಕಳ್ಳನ ದೃಶ್ಯ ಸೆರೆಯಾಗಿದೆ. ಮಡಿಕೇರಿಯಲ್ಲಿ ಸಾಲು ಸಾಲು ಕಳ್ಳತನದ ಘಟನೆಯಿಂದ ಜನತೆಗೆ ಈಗ ಯುವ ಚೋರ ನ ಬಗ್ಗೆ ಆತಂಕ ಶುರುವಾಗಿದೆ.
ಪೊಲೀಸರು ಈ ಕಳ್ಳನನ್ನು ಕೂಡಲೇ ಕಾರ್ಯಾಚರಣೆ ಮೂಲಕ ಬಂಧಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಚುಮುಚುಮು ಚಳಿಗೆ ಬೆಚ್ಚಿಗಿನ ಹೊದಿಕೆ ಹೊತ್ತು ಮಲಗಲು ಹೊರಟವರಿಗೆ ಇದೀಗ ಕನಸಿನಲ್ಲೂ ಈ ಚೋರ ಕಾಣಿಸಿಕೊಳ್ಳುತ್ತಿದ್ದಾನಂತೆ. ಪೊಲೀಸರು ಈತನ ಶೋಧಕ್ಕೆ ಮುಂದಾಗಿದ್ದು ಈತ ಚಳ್ಳೆಹಣ್ಣು ತಿನಿಸಿ ಪರಾರಿಯಾಗುತ್ತಿದ್ದಾನೆ.