ಮಾಲ್ದಾರೆ:ಒಂದು ಕೋಟಿ ರೂ ವೆಚ್ಚದ ವಿವಿಧ ರಸ್ತೆ ಕಾಮಗಾರಿಗೆ ಶಾಸಕ ಎಎಸ್ ಪೊನ್ನಣ್ಣ ಚಾಲನೆ

Feb 10, 2026 - 12:56
 0  318
ಮಾಲ್ದಾರೆ:ಒಂದು ಕೋಟಿ ರೂ ವೆಚ್ಚದ ವಿವಿಧ ರಸ್ತೆ ಕಾಮಗಾರಿಗೆ ಶಾಸಕ ಎಎಸ್ ಪೊನ್ನಣ್ಣ ಚಾಲನೆ

ಸಿದ್ದಾಪುರ; ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು ಭೇಟಿ ನೀಡಿದರು. ಮಾಲ್ದಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಶಾಸಕರು ಭೂಮಿ ಪೂಜೆ ನೆರವೇರಿಸಿದರು.

 ಇದರಲ್ಲಿ ಮಾಲ್ದಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈಲಾಪುರದಿಂದ ಬಾಡಗ ಗುಡ್ಲೂರು ರಸ್ತೆ ಅಭಿವೃದ್ಧಿ, ಕಾಡಗಂಡಿ ಜನತಾ ಕಾಲೋನಿ-ಗುಡ್ಲೂರು ಮುಡಬೈಲ್ ಕುರುಬರ ಹಾಡಿಗಾಗಿ ಚೆನ್ನಯ್ಯನಕೋಟೆಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ ಒಳಗೊಂಡಿದೆ. ಈ ಕಾಮಗಾರಿಗಳಿಗೆ ₹1 ಕೋಟಿ ಅನುದಾನವನ್ನು ಶಾಸಕರು ಒದಗಿಸಿದ್ದಾರೆ.

ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಅಧ್ಯಕ್ಷರು ಶ್ರೀ ಪಟ್ಟಡ ರಂಜಿ ಪೂಣಚ್ಚ, ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಾಲತಿ, ಮೊಹಮ್ಮದ್ ಆಲೀ, ಹನೀಫ್, ಇಸ್ಮಾಯಿಲ್, ಚಿನ್ನಮ್ಮ, ಸಮೀರ್, ನಿಯಾಜ್, ತಾಲೂಕು ಪ್ರಚಾರಸಮಿತಿಯಅಧ್ಯಕ್ಷರು ಮತೀನ್, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷರು ಹನೀಫ್, ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷರು ರಫೀಕ್, ಚೆಕ್ಕು, ಅನಿಲ್, ಕುಂಡಚ್ಚಿರ ಮಂಜು ದೇವಯ್ಯ, ಜಾಫರ್, ಅಯೂಬ್, ಮಾದೇವ, ಮಂಜುನಾಥ್ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0