ಅಖಿಲ ಕೊಡವ ಸಮಾಜದ ಆಡಳಿತ ಮಂಡಳಿ ಮತ್ತು ನೆಲಜಿ ಮಲ್ಮ ಹಿತರಕ್ಷಣಾ ಸಮಿತಿ ಸದಸ್ಯರಿಂದ ಶಾಸಕ ಎಎಸ್ ಪೊನ್ನಣ್ಣ ಭೇಟಿ
admincoorgdaily

ಮಡಿಕೇರಿ:ಅಖಿಲ ಕೊಡವ ಸಮಾಜದ ಆಡಳಿತ ಮಂಡಳಿ ಮತ್ತು ನೆಲಜಿ ಮಲ್ಮ ಹಿತರಕ್ಷಣಾ ಸಮಿತಿಯ ಸದಸ್ಯರುಗಳು ಜಂಟಿಯಾಗಿ ಶಾಸಕರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರನ್ನು ದಿನಾಂಕ 16/07/2026 ಬುಧವಾರ ಬೆಂಗಳೂರಿನ ನಿವಾಸದ ಕಚೇರಿಯಲ್ಲಿ ಭೇಟಿ ಮಾಡಿದ್ದು, ವಿವಾದಿತ ಮಲ್ಮ ಬೆಟ್ಟದ ತಪ್ಪಲಿನ ಸ್ಥಳದ ಮರು ಖರೀದಿಯ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಪರದಂಡ ಸುಬ್ರಮಣಿ ಕಾವೇರಪ್ಪ, ಕಾರ್ಯದರ್ಶಿ ಚೊಟ್ಟಂಡ ಪ್ರಭು ಸೋಮಯ್ಯ, ಖಜಾಂಚಿ ಕಾಯಪಂಡ ಸುನಿಲ್ ಮತ್ತು ಸಹ ಕಾರ್ಯದರ್ಶಿ ಮನ್ನೇರ ಸರಸ್ವತಿ ರಮೇಶ್, ಕಾನೂನು ಸಲಹೆಗಾರರಾದ ಕುಟ್ಟಂಡ ವಿಜಯ್ ಉತ್ತಪ್ಪ, ಕೇಂದ್ರೀಯ ಸಮಿತಿ ಸದಸ್ಯರಾದ ಡಾ.ಚೆಪ್ಪುಡಿರ ಕುಶಾಲಪ್ಪ ಇವರುಗಳ ಉಪಸ್ಥಿತಿಯಲ್ಲಿ ನೆಲಜಿ ಮಲ್ಮ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಮಣವಟ್ಟಿರ ಹರೀಶ್ ಕುಶಾಲಪ್ಪ, ಸದಸ್ಯರಾದ ಮಣವಟ್ಟಿರ ಅರುಣ್ ಪಳಂಗಪ್ಪ , ಮಚ್ಚುರ ರವೀಂದ್ರ, ಚಂಗೇಟಿರ ಕುಶಾಲಪ್ಪ ಉಪಸ್ಥಿತರಿದ್ದರು.