Kodagu

ನಾಪೋಕ್ಲುವಿನಲ್ಲಿ ಹಲ್ಲೆ ಪ್ರಕರಣ: ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಲಿ : ಎಸ್.ವೈ.ಎಸ್ ಕೊಡಗು

admincoorgdaily

Sys logo

ಮಡಿಕೇರಿ; ಕೊಡಗು ಸರ್ವ ಧರ್ಮೀಯರೂ ಸೌಹಾರ್ದತೆಯಿಂದ ಜೀವನ ನಡೆಸುತ್ತಿರುವ ಜಿಲ್ಲೆ. ನಿನ್ನೆ ನಾಪೋಕ್ಲುವಿನಲ್ಲಿ ನಡೆದ ಅಹಿತಕರ ಘಟನೆಯನ್ನು ಸುನ್ನಿ ಯುವಜನ ಸಂಘ (ಎಸ್.ವೈ.ಎಸ್) ಕೊಡಗು ಜಿಲ್ಲಾ ಸಮಿತಿ ಖಂಡಿಸುತ್ತಿದೆ.

ನ್ಯಾಯಯುತವಾದ ತನಿಖೆ ನಡೆಸಿ ಆರೋಪಿಗಳು ಯಾರೇ ಆದರೂ ಅರ್ಹ ಶಿಕ್ಷೆ ಆಗಲಿ. ಪ್ರತಿಯೊಂದು ಧರ್ಮಗಳು ತಿಳಿಸುವ ಶಾಂತಿ ಹಾಗೂ ಸೌಹಾರ್ದತೆಯನ್ನು ಅಳವಡಿಸಿಕೊಂಡು ಸುಂದರ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು.

ತಮ್ಮ ರಾಜಕೀಯ ಬೇಳೆ ಬೇಯಿಸುವ ಪ್ರಯತ್ನಕ್ಕೆ ಯಾರೂ ಮುಂದಾಗದೆ ನ್ಯಾಯದ ಪರವಾಗಿ ನಿಲ್ಲುವ ಮನೋಭಾವ ಪ್ರತಿಯೊಬ್ಬರಲ್ಲೂ ಇರಲಿ ಎಂದು ಎಸ್.ವೈ.ಎಸ್ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷರಾದ ಮುನೀರ್ ಮಲ್ಳರಿ ಹಾಗೂ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.