ಫೆ.19 ರಂದು ಕಸಾಪ ವತಿಯಿಂದ ಡಾ.ಸೂಯ೯ಕುಮಾರ್ ಅವರಿಗೆ ಬಿ.ಎಸ್. ಜಿ. ದತ್ತಿ ಪ್ರಶಸ್ತಿ ಪ್ರದಾನ

Feb 15, 2026 - 12:46
 0  158
ಫೆ.19 ರಂದು ಕಸಾಪ ವತಿಯಿಂದ ಡಾ.ಸೂಯ೯ಕುಮಾರ್ ಅವರಿಗೆ ಬಿ.ಎಸ್. ಜಿ. ದತ್ತಿ ಪ್ರಶಸ್ತಿ ಪ್ರದಾನ

ಮಡಿಕೇರಿ ಫೆ. 15 - ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೀಡಲಾಗುವ ಪತ್ರಿಕಾರಂಗದ ಭೀಷ್ಮ ಬಿ.ಎಸ್. ಗೋಪಾಲಕೖಷ್ಣ ಹೆಸರಿನ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಫೆ.19 ರಂದು ಗುರುವಾರ ಸಂಜೆ 6 ಗಂಟೆಗೆ ಮಡಿಕೇರಿಯಲ್ಲಿ ಕೊಡಗು ಪತ್ರಕತ೯ರ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದೆ.

ಮಡಿಕೇರಿಯ ವೈದ್ಯ ಸಾಹಿತಿ ಡಾ.ಕೆ.ಬಿ. ಸೂಯ೯ಕುಮಾರ್ ಅವರಿಗೆ ಅಂದು ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ನಗರದ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಫೆ.19 ರಂದು ಗುರುವಾರ ಸಂಜೆ 6 ಗಂಟೆಗೆ ಆಯೋಜಿತ ಸಮಾರಂಭವನ್ನು ಹಿರಿಯ ಸಾಹಿತಿ ಬಿ.ಎ.ಷಂಶುದ್ದೀನ್ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಬಾಲಸುಬ್ರ್ರಹ್ಮಣ್ಯ ಕಂಜಪ೯ಣೆ, ದಿ. ಬಿ.ಎಸ್. ಗೋಪಾಲಕೖಷ್ಣ ಹೆಸರಿನ ದತ್ತಿ ಪ್ರಶಸ್ತಿಯನ್ನು ಸಾಹಿತಿ ಬಾಲಸುಬ್ರಹ್ಮಣ್ಯ ಕಂಜಪ೯ಣೆ ವೈದ್ಯ ಸಾಹಿತಿ ಡಾ.ಕೆ.ಬಿ. ಸೂಯ೯ಕುಮಾರ್ ಅವರಿಗೆ ಪ್ರದಾನ ಮಾಡಲಿದ್ದಾರೆ.

 ಕೊಡಗು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವಕಾಮತ್ ಅಧ್ಯಕ್ಷತೆಯಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಹಿರಿಯ ಪತ್ರಕತ೯ರಾದ ಜಿ.ರಾಜೇಂದ್ರ, ಬಿ.ಜಿ. ಅನಂತಶಯನ, ಟಿ.ಪಿ. ರಮೇಶ್, ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಪಾಲ್ಗೊಳ್ಳಲಿದ್ದಾರೆ ಎಂದು ಕಸಾಪ ಪ್ರಕಟಣೆ ತಿಳಿಸಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0