ಲಿಂಗ ಸಮಾನತೆಯಿಂದ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ: ಪ್ರಸನ್ನ ಕುಮಾರ್

ಲಿಂಗ ಸಮಾನತೆಯಿಂದ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ: ಪ್ರಸನ್ನ ಕುಮಾರ್

ವಿರಾಜಪೇಟೆ,ಫೆ:09: ಗಂಡು ಮಕ್ಕಳಿಗೆ ಮಾತ್ರ ಆದ್ಯತೆ ನೀಡದೆ ಹೆಣ್ಣು ಮಕ್ಕಳಿಗೂ ಸಮಾನ ಅವಕಾಶ ಕಲ್ಪಿಸಿ. ಹೆಣ್ಣು ಮಕ್ಕಳು ಸಮಾಜ ಕಣ್ಣು ಎಂದು ತಿಳಿದು ಸಮಾಜವು ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುವಂತಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಪ್ರಸನ್ನ ಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವಿರಾಜಪೇಟೆ, ಗ್ರಾಮಾಂತರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಶ್ವಿನಿ ಸ್ತ್ರೀ ಶಕ್ತಿ ಸಂಘ ಸಂಯುಕ್ತ ಆಶ್ರಯದಲ್ಲಿ ವಿರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ರಿಶ್ಚಿಯನ್ ಕಾಲೋನಿ ಅಂಗನವಾಡಿ ಕೇಂದ್ರದ ಆವರಣದಲ್ಲಿ ಪೋಷಣ ಮಾಸಾಚರಣೆ ಅಂಗವಾಗಿ ಅಪೌಷ್ಠಿಕ ಮುಕ್ತ ಭಾರತ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಆಗಮಿಸಿ ಉದ್ಘಾಟಿಸಿ ಮಾತನಾಡಿದ ಪ್ರಸನ್ನ ಕುಮಾರ್ ಅವರು,ಹುಟ್ಟುವ ಮಗು ಹೆಣ್ಣಾದರು ಲಿಂಗ ತಾರತಮ್ಯ ಮಾಡದೇ ಉತ್ತಮ ಭವಿಷ್ಯ ನಿರ್ಮಾಣ ಮಾಡುವತ್ತಾ ಪೋಷಕರು ಗಮನಹರಿಸುವಂತಾಗಬೇಕು. ಪ್ರಸ್ತುತ ಹುಟ್ಟುವ ಮಕ್ಕಳಲ್ಲಿ ಅಪೌಷ್ಟಿಕತೆಯ ಕಾರಣ ಬೆಳವಣಿಗೆಯಲ್ಲಿ ಕುಂಠಿತ ಕಂಡಿದೆ. ಇದನ್ನು ಮನಗಂಡ ಸರ್ಕಾರವು ಮಕ್ಕಳ ಬೆಳವಣಿಗೆ ಸರಿಪಡಿಸಲು ಪೋಷಣ್ ಕಾರ್ಯಕ್ರಮ ಹಮ್ಮಿಕೊಂಡಿದೆ.

ಗರ್ಭಿಣಿ ಮಹಿಳೆಯು ಪೌಷ್ಠಿಕ ಆಹಾರ ಬಳಕೆ ಹೆಚ್ಚು ಮಾಡುವತ್ತಾ ಗಮನಹರಿಸಿಬೇಕು. ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮ ಮತ್ತು ಯೋಜನೆಗಳ ಸದ್ಬಳಕೆಗೆ ಸರ್ವ ಸಹಕಾರ ಅಗತ್ಯ ಎಂದು ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಹಾಯಕ ಅಧಿಕಾರಿಗಳಾದ ರೀತಾ ಅವರು ತಮ್ಮ ಪ್ರಸ್ತಾವಿಕ ಭಾಷಣದಲ್ಲಿ ಗರ್ಭಿಣಿ ಸ್ತ್ರೀಯರು ಹೆಚ್ಚು ಒತ್ತಡದಿಂದ ಬಳಲುತ್ತಿರುವುದು ಕಂಡು ಬರುತ್ತಿದೆ. 

ಆಹಾರ ಪದ್ಧತಿ ಬದಲಾವಣೆ ಮಾಡದೆ ಹಾಗೂಜ ಹೆಚ್ಚಿನ ಪೋಷಕಾಂಶಗಳು ಹೊಂದಿರುವ ಮಿತ ಆಹಾರ ಸೇವಿಸುವುದು ಉತ್ತಮ. 06 ವಯಸ್ಸು ಕೆಳಗಿರುವ ಮಕ್ಕಳಲ್ಲಿ ಬೆಳವಣಿಗೆಗಳು ಕುಂಠಿತ ಕಂಡಿವೆ. ಕಾರಣ ಮಕ್ಕಳು ಮೊಬೈಲು ಮತ್ತು ಟ.ವಿ. ನೋಡವಲ್ಲಿ ತಮ್ಮ ದಿನಚರಿಯನ್ನು ಮರೆಯುತ್ತಿದ್ದಾರೆ. ರೋಗನಿರೋಧಕ ಆಹಾರ ಪದ್ಧತಿಯನ್ನು ಅನುಸರಿಸಿದಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಪ್ರಯತ್ನಿಸಬಹುದು. ಸಸ್ಯಹಾರ ಮತ್ತು ಮಾಂಸಹಾರ ಆಹಾರ ಮಿತವಾಗಿ ಬಳಸುವುದು ಸೂಕ್ತ ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ ಇಲಾಖೆಯ ವತಿಯಿಂದ ಬೇಟಿ ಬಚಾವೋ- ಬೇಟಿ ಪಡವೋ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲಾಯಿತು. ಗ್ರಾಮ ವ್ಯಾಪ್ತಿಯ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನಡೆಸಲಾಯಿತು. ಅಂಗನವಾಡಿ ಮಕ್ಕಳಿಗೆ ಅಕ್ಷರಾಭ್ಯಸ ಮಾಡಿಸಲಾಯಿತು. ಬಳಿಕ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶ್ವಿನಿ ಸ್ತ್ರೀ ಶಕ್ತಿ ಸಂಘದ ಸದಸ್ಯರಿಂದ ವಿವಿಧ ಬಗೆಯ ತಿಂಡಿ ತಿನಿಸುಗಳ ಪ್ರದರ್ಶನ ನಡೆಯಿತು.

ಕೆದಮುಳ್ಳೂರು ಗ್ರಾಮ ಪಂಚಾಯಿತಿ ಉಪದ್ಯಕ್ಷರಾದ ಎಂ.ಎ. ಪರಮೇಶ್ವರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು,ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಬಿ.ಮಣಿ ಅವರು ಮಾತನಾಡಿದರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅದಿಕಾರಿಗಳಾದ ರೇಣುಕಾ, ಗ್ರಾಮ ಪಂಚಾಯಿತಿ ಸದಸ್ಯರಾದ ಮಾಳೇಟಿರ ಸಾಬ ಮುತ್ತಪ್ಪ, ವೀಣಾ, ಅಂಗನವಾಡಿ ನೌಕರರ ಸಂಘದ ಅದ್ಯಕ್ಷರಾದ ಶೀಲಾ ಎ.ಬಿ.ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಕ್ರಿಶ್ಚಿಯನ್ ಕಾಲೋನಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಉಷಾ ಕುಮಾರಿ ಅವರು ಕಾರ್ಯಕ್ರಮ ಸ್ವಾಗತಿಸಿ ನಿರೂಪಣೆ ಮಾಡಿದರು, ವನೀತ ಅವರು ವಂದಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಗರ್ಭಿಣಿ ಮಹಿಳೆಯರು, ಚಿಣ್ಣರು, ಚಿಣ್ಣರ ಪೊಷಕರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.