ಪಾಲಿಬೆಟ್ಟ;ಕುಡಿದ ಮತ್ತಿನಲ್ಲಿ ಪೊಲೀಸ್ ಮೇಲೆ ಹಲ್ಲೆ

Apr 9, 2026 - 10:01
 0  1.5k
ಪಾಲಿಬೆಟ್ಟ;ಕುಡಿದ ಮತ್ತಿನಲ್ಲಿ ಪೊಲೀಸ್ ಮೇಲೆ ಹಲ್ಲೆ
ಸಾಂದರ್ಭಿಕ ಚಿತ್ರ

ಮಡಿಕೇರಿ: ಕರ್ತವ್ಯದಲ್ಲಿದ್ದ ಪೊಲೀಸ್ ಮುಖ್ಯಪೇದೆಯ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿ ಕರ್ತವ್ಯಕ್ಕೆ ಪ್ರಕರಣಕ್ಕೆ ಅಡ್ಡಿಪಡಿಸಿದ ಸಂಬಂಧಿಸಿದಂತೆ ಆರೋಪಿಯ ಮೇಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪಾಲಿಬೆಟ್ಟದ ಜುಮಾ ಮಸೀದಿಯ ಬಳಿ ತಾ. 7 ರಂದು ರಾತ್ರಿ 10.300 ಸಮಯಕ್ಕೆ ಪಾಲಿಬೆಟ್ಟದ ಊರುಗುಪ್ಪೆ ನಿವಾಸಿ ಯಾಗಿರುವ ಸೈಯದ್ ಅಲವಿ ಸಾರ್ವಜನಿಕರಿಗೆ (37) ಎಂಬಾತ ಮದ್ಯ ಸೇವಿಸಿ ತೊಂದರೆ ಮಾಡುತ್ತ ಕಿರುಚಾಡುತ್ತಿದ್ದನು ಎನ್ನಲಾಗಿದೆ. ಈ ವಿಚಾರ ತಿಳಿದು ಪಾಲಿಬೆಟ್ಟ ಉಪಠಾಣೆಯ ಮುಖ್ಯಪೇದೆ ಎಂ.ಎಂ. ಆಲಿಬಾ ಸ್ಥಳಕ್ಕೆ ತೆರಳಿ ಸೈಯದ್ ಅಲವಿ 2WO ಮನೆಗೆ ತೆರಳುವಂತೆ ಸೂಚಿಸಿದ್ದಾರೆ.

ಆರೋಪಿ ಸೈಯದ್ ಅಲವಿ ಮುಖ್ಯಪೇದೆಯ ಸಮವಸ್ತ್ರ ಹಿಡಿದು ಎಳೆದಾಡಿ ಸಮವಸ್ತ್ರದ ಅಂಗಿಯನ್ನು ಹರಿದು ಎಡಗಣ್ಣಿಗೆ ಗುದ್ದಿ ಗಾಯಗೊಳಿಸಿ ತಳ್ಳಿ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಗಾಯಗೊಂಡ ಮುಖ್ಯಪೇದೆ ಪಾಲಿಬೆಟ್ಟ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಕೊಂಡಿದ್ದಾರೆ. ಆಲಿಬಾ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0