ಪೊನ್ನಂಪೇಟೆ:ಬಿಜೆಪಿ‌ ಮುಖಂಡ ಚೀರಂಡ ಕಂದ ಸುಬ್ಬಯ್ಯ ಹೃದಯಾಘಾತದಿಂದ ನಿಧನ

Mar 12, 2026 - 20:16
Mar 12, 2026 - 20:26
 0  548
ಪೊನ್ನಂಪೇಟೆ:ಬಿಜೆಪಿ‌ ಮುಖಂಡ ಚೀರಂಡ ಕಂದ ಸುಬ್ಬಯ್ಯ ಹೃದಯಾಘಾತದಿಂದ ನಿಧನ

ಪೊನ್ನಂಪೇಟೆ; ಸಮೀಪದ ಮುಗಟಗೇರಿ ಗ್ರಾಮದ ನಿವಾಸಿ, ಬಿಜೆಪಿ ಮುಖಂಡರು, ಪೊನ್ನಂಪೇಟೆ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಚೀರಂಡ ಕಂದ ಸುಬ್ಬಯ್ಯ (53) ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.

 ಮೃತರ ಅಂತಿಮ ಸಂಸ್ಕಾರ ಇಂದು ಮಧ್ಯಾಹ್ನ 3 ಗಂಟೆಗೆ ಅವರ ಸ್ವಹಗ್ರಹದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಹಲವಾರು ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಕಂದ ಸುಬ್ಬಯ್ಯ ನೇರ ನುಡಿ ವ್ಯಕ್ತಿತ್ವ ಉಳ್ಳವರು, ಸಮಾಜದ ಅಂಕುಡೊಂಕುಗಳ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಹಲವು ಪತ್ರಿಕೆಗಳಲ್ಲಿ ಲೇಖನಗಳನ್ನು ಕೂಡ ಬರೆಯುತ್ತಿದ್ದರು. ಅಪ್ಪಟ ದೇಶಪ್ರೇಮಿಯಾಗಿದ್ದ ಇವರು ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಜನರ ಪ್ರೀತಿ ಗಳಿಸಿದ್ದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0